ಕೋಲಾರ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆ ಮಾಡಲು ಕೋಲಾರ ಜಿಲ್ಲೆಗೆ ಆಗಮಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸ್ವಾಗತ ಕೋರಿತು. ಸಂಘದ ರಾಜ್ಯ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ಹಾನಿ ಆಗಿದ್ದು, ಮಳೆ ಆಶ್ರಿತ ಬೆಳೆಗೆ ಪ್ರತಿ ಎಕರೆಗೆ ಎರಡು ಲಕ್ಷ ರೂ., ನೀರಾವರಿ ಆಶ್ರಿತ ತೋಟಗಾರಿಕಾ ಬೆಳೆಗೆ ಎಕರೆ 4 ರಿಂದ 8 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿ ಸಿಎಂಗೆ ಮನವಿ ನೀಡಲಾಗಿತ್ತು.
ಆದರೆ, ಸಿಎಂ ರೈತರಿಗೆ ಮಳೆ ಆಶ್ರಿತ ಬೆಳೆ ಗಳ ಗುಂಟೆಗೆ 70 ರೂ. ಅಂದರೆ 1 ಎಕರೆಗೆ 2800 ರೂ. ಮತ್ತೆ ನೀರಾವರಿ ಆಶ್ರಿತ ತೋಟಗಾರಿಕಾ ಬೆಳೆಗೆ 150 ರೂ. ಅಂದ್ರೆ 1 ಎಕರೆಗೆ 6000 ರೂ. ಆಗುತ್ತದೆ ಎಂದು ಹೇಳಿದರು. ಇದು ರೈತರಿಗೆ ನೀಡುವ ಬೆಳೆ ಪರಿಹಾರವಂತು ಅಲ್ಲವೇ ಅಲ್ಲ.
ಇದನ್ನೂ ಓದಿ:- ಅಂಗನವಾಡಿಗಳ ಅಭಿವೃದ್ದಿಗೆ ಶ್ರಮ: ಮೀನಾಕ್ಷಮ್ಮ
ರೈತರಿಗೆ ಅಗೌರವದ ರೀತಿ ಭಿಕ್ಷೆ ರೂಪದಲ್ಲಿ ನೀಡುವುದನ್ನು ಬಿಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾಡಿದ ರೈತ ಮುಖಂಡರು, ವಿರೋಧ ಪಕ್ಷದ ನಾಯಕರಾದ ತಾವು ರೈತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರವನ್ನು ಒತ್ತಾಯಿಸುವಂತೆ ಆಗ್ರಹಿಸಿದರು. ಜಿಲ್ಲೆಯ ಬಹುತೇಕ ಶಾಲಾ ಕಾಲೇಜುಗಳು, ಅಂಗನವಾಡಿ ಕಟ್ಟಡಗಳು ಮಳೆಯಿಂದ ಕುಸಿದಿದೆ. ತಿಪ್ಪೇನಹಳ್ಳಿ ಗ್ರಾಮದಲ್ಲಿ ಅಂಗನವಾಡಿ, ಶಾಲಾ ಕೊಠಡಿ ಮತ್ತು ಕ್ಯಾಲನೂರು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಕೊಠಡಿಗಳು ಕುಸಿದಿವೆ. ವೇಮಗಲ್ ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್ ಕೂಡ ಕುಸಿದಿದೆ.
ಜೊತೆಗೆ ವೇಮಗಲ್ ಸರ್ಕಾರಿ ಪ್ರೌಢ ಶಾಲೆ ಇಂದು ಅಥವಾ ನಾಳೆ ಬೀಳುವ ಹಂತದಲ್ಲಿದೆ ಎಂದು ವಿವರಿಸಿದರು. ವೇಮಗಲ್ ಸರ್ಕಾರಿ ಪ್ರೌಢಶಾಲೆ ಸಂಪೂರ್ಣ ಶಿಥಿಲಗೊಂಡಿದೆ. ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿ, ಅಧಿವೇಶನದಲ್ಲಿ ಅಂಗನವಾಡಿ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ ಮನವಿ ನೀಡಿದರು.
ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಈಕಂಬಳ್ಳಿ ಮಂಜು, ಜಗನ್ನಾಥ್‌ರೆಡ್ಡಿ, ಪುತ್ತೆರಿ ರಾಜು, ವೇಮಗಲ್ ಬಹದ್ದೂರ್‌ಖಾನ್, ವೇಮಗಲ್ ಗಂಗರಾಜು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.