Advertisement

ಪುಟ್ಟರಾಜರ ಹೆಸರಿನಲ್ಲಿ ಹೈಟೆಕ್‌ ರಂಗಮಂದಿರ ಸ್ಥಾಪನೆಗೆ ಆಗ್ರಹ

04:07 PM Jul 20, 2019 | Suhan S |

ಗದಗ: ಇಲ್ಲಿನ ಭೂಮರೆಡ್ಡಿ ಸರ್ಕಲ್ ಬಳಿ ಜಿಲ್ಲಾಡಳಿ ತೆರವುಗೊಳಿಸಿದ ವಕಾರು ಸಾಲು ಪ್ರದೇಶದಲ್ಲಿ ಪಂ| ಪುಟ್ಟರಾಜ ಕವಿಗವಾಯಿಗಳ ಸ್ಮರಣಾರ್ಥ ಹೈಟೆಕ್‌ ರಂಗಮಂದಿರ ನಿರ್ಮಾಣಕ್ಕೆ ಕನಿಷ್ಠ ಎರಡು ಎಕರೆ ಪ್ರದೇಶವನ್ನು ಮೀಸಲಿಡಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.

Advertisement

ಈ ಕುರಿತು ಶುಕ್ರವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿ, ಗದಗ ಪರಿಸರದಲ್ಲಿ ಒಂದು ಕಾಲದಲ್ಲಿ ಪುಷ್ಪಾ ಹಾಗೂ ಹೇಮರಡ್ಡಿ ಮಲ್ಲಮ್ಮ ಥೇಟರ್‌ ಸೇರಿದಂತೆ ಇತರೆ ಸಂಚಾರಿ ವೃತ್ತಿ ನಾಟಕ ಕಂಪನಿಗಳು ದಿನಕ್ಕೆ ಮೂರ್‍ನಾಲು ಪ್ರದರ್ಶನ ನೀಡಿದ ಉದಾಹರಣೆಗಳಿವೆ. ಲಿಂ|ಡಾ| ಪುಟ್ಟರಾಜಕವಿ ಗವಾಯಿಗಳು ತಪೋಭೂಮಿಯನ್ನಾಗಿಸಿಕೊಂಡಿದ್ದರು. ಪಂ| ಪಂಚಾಕ್ಷರ ಗವಾಯಿಗಳು ಕಟ್ಟಿದ ನಾಟಕ ಕಂಪನಿಯನ್ನು ಇಂದಿನವರೆಗೂ ಮುಂದುವರಿಯುತ್ತಿದೆ.

ಗದುಗಿನಲ್ಲಿ ಗರೂಢ ಸದಾಶಿವರಾಯರು, ಸಕ್ರೀ ಬಾಳಾಚಾರ್ಯ, ಎಚ್.ಎನ್‌. ಹೂಗಾರ, ವೆಂಕೋಬರಾಯರು, ಬಿ.ಕೆ. ಶಂಕರ, ಸಿ.ಜಿ.ಬಿ ಹಿರೇಮಠ, ಆರ್‌.ಎನ್‌.ಕೆ. ಮಿತ್ರ ಮಂಡಳಿ, ಅಭಿನಯ ರಂಗ, ಸಂಕಣ್ಣ ಡಂಬಳ, ಪರಮೇಶಪ್ಪ ಪಡೇಸೂರ, ಶಿವರುದ್ರಯ್ಯ ಫಕ್ಕೀರಸ್ವಾಮಿಮಠ, ಸುಶೀಲಮ್ಮ ಬಳ್ಳಾರಿ, ಪ್ಲೋರೀನಬಾಯಿ, ಪುರಾಣಿಕಮಠ ಸೇರಿದಂತೆ ಮುಂತಾದ ಹಿರಿಯ ರಂಗಕರ್ಮಿಗಳು ರಂಗಭೂಮಿಯ ಕಲೆಯನ್ನು ಜೀವಂತಗೊಳಿಸಿದ್ದಾರೆ. ರಂಗಭೂಮಿಗೆ ಬೇಕಾಗುವ ಸಾಮಗ್ರಿಗಳನ್ನು ಪೂರೈಸುವ ಕುಟುಂಬಗಳು ಇಂದಿಗೂ ಗದುಗಿನಲ್ಲಿದ್ದು, ಅದೇ ಅವರ ಜೀವನ ಆಧಾರವಾಗಿದೆ.

ಗದುಗಿನಲ್ಲಿ ವರ್ಷದುದ್ದಕ್ಕೂ ವಿವಿಧ ನಾಟಕ ಕಂಪನಿಗಳು ಇಲ್ಲಿನ ರಂಗಾಸಕ್ತರಿಗೆ ಕಲಾಪ್ರದರ್ಶನ ನೀಡುತ್ತ ಬಂದಿವೆ. ಬಂದ ನಾಟಕ ಕಂಪನಿಗಳು ರಂಗಸಜ್ಜಿಕೆಯನ್ನು ಹಾಕುವ ಮತ್ತು ತೆಗೆಯುವುದಕ್ಕೆಯೇ ದುಡಿಮೆಯ ಮುಕ್ಕಾಲು ಭಾಗ ಖರ್ಚು ಆಗಿ ಮುಂದಿನ ಊರಿಗೆ ಹೋಗುವಾಗ ಬರಿಗೈಲೇ ಹಾಗೂ ಲಾರಿ ಬಾಡಿಗೆಗೂ ತೊಂದರೆ ತೆಗೆದುಕೊಳ್ಳುವಂತ ಪರಿಸ್ಥಿತಿ ಇದೆ.

ಈ ಸಮಸ್ಯೆಯನ್ನು ನಿಗಿಸುವ ಮೂಲಕ ಗದಗ ಪರಿಸರದಲ್ಲಿ ರಂಗಭೂಮಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲು ಎರಡು ಎಕರೆ ಪ್ರದೇಶವನ್ನು ರಂಗಮಂದಿರಕ್ಕಾಗಿ ಕಾಯ್ದಿರಿಸಬೇಕು ಎಂದು ಮನವಿ ಮಾಡಿದರು.

Advertisement

ಶಿವಬಸವ ಜನಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಬಸವಣ್ಣೆಯ್ಯ ಹಿರೇಮಠ, ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ನಿಸ್ಸಾರಅಹ್ಮದ್‌ ಖಾಜಿ, ವೀರರಾಣಿ ಕಿತ್ತೂರ ಚೆನ್ನಮ್ಮ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ ಸಂಸ್ಥಾಪಕ ಎಂ.ಬಿ. ದೇಸಾಯಿ, ಅನಿಲ ಮೆಣಸಿನಕಾಯಿ ಅಭಿಮಾನಿ ಬಳಗದ ಮಹೇಶಗೌಡ ಪಾಟೀಲ, ಪುಟ್ಟರಾಜ ಕಲಾಪೋಷಕರ ಸಂಘದ ಅಧ್ಯಕ್ಷ ಶರಣಪ್ಪ ಚವಡಿ, ಡಾ| ಬಾಬಾಸಾಹೇಬ ಅಂಬೇಡ್ಕರ್‌ ಜ್ಞಾನ ಪ್ರಸಾರ ಕೇಂದ್ರ ಸಮಿತಿಯ ಮಹೇಶ ದಾಸರ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಖಜಾಂಚಿ ವೆಂಕಟೇಶ ಬೇಲೂರ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಗದಗ: ತೆರವುಗೊಳಿಸಿರುವ ವಕಾರು ಸಾಲ ಪ್ರದೇಶದ ಎರಡು ಎಕರೆ ಜಾಗೆಯನ್ನು ಪಂ| ಪುಟ್ಟರಾಜಕವಿ ಗವಾಯಿಗಳ ಸ್ಮಾರಕ ರಂಗ ಮಂದಿರ ನಿರ್ಮಾಣಕ್ಕೆ ಮೀಸಲಿಡಬೇಕು ಎಂದು ವಿವಿಧ ಕಲಾ ಸಂಘಟನೆಗಳ ಪ್ರಮುಖರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next