ಸವದತ್ತಿ: ಮಲಪ್ರಭಾ ಹಿನ್ನೀರಿಗೆ ಪೈಪಲೈನ್ ಮೂಲಕ ನೀರು ಪಡೆದ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದನ್ನು ಖಂಡಿಸಿದ ಸವದತ್ತಿ, ಉಗರಗೋಳದ ರೈತರು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಪ್ರತಿಭಟನೆ ನಡೆಸಿದರು.
ಈ ವೇಳೆ ರೈತ ಶಿವಾನಂದ ಹೂಗಾರ ಮಾತನಾಡಿ, ಹೆಸ್ಕಾಂ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಜಿಲ್ಲಾಕಾರಿಗಳ ಆದೇಶದ ಮೇರಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು, ಇಲ್ಲವಾದಲ್ಲಿ ಅವರ ಆದೇಶದಂತೆ 6 ದಿನ ಮಾತ್ರ ತಗೆದು ಮತ್ತೆ ಯಥಾಸ್ಥಿತಿ ಪೂರೈಸಲಾಗುವುದು ಎಂದು ಹೇಳಿದ್ದರು. ಆದರೆ 6 ದಿನಗಳಾದರೂ ನಮಗೆ ವಿದ್ಯುತ್ ಪೂರೈಸಿಲ್ಲ. ಜಿಲ್ಲಾಧಿಕಾರಿ ಆದೇಶ ಬಂದಿದ್ದರೂ ಹೆಸ್ಕಾಂ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿರುವುದು ಸರಿಯಲ್ಲ. ಎಂದು ಆರೋಪಿಸಿದ ರೈತರು, ಬಿಸಿಲಿನ ತಾಪಕ್ಕೆ ನೀರಿನ ಸಮಸ್ಯೆ ಎದುರಾಗಿದ್ದು, ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ವಿದ್ಯುತ್ ಕಲ್ಪಿಸುವಂತೆ ಈಗಾಗಲೇ ಇರಡು ಭಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಹೆಸ್ಕಾಂ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಅಲ್ಲದೇ ಶಾಸಕರ ಹಾಗೂ ಜಿಲ್ಲಾಧಿಕಾರಿಗಳ ಮಾತಿಗೆ ಕಿಂಚಿತ್ತೂ ಗೌರವ ಕೊಡುತ್ತಿಲ್ಲ. ಇದೇ ರೀತಿ ಹೆಸ್ಕಾಂ ಅಧಿಕಾರಿಗಳ ಆಟ ಮುಂದುವರೆದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕೊನೆಗೆ ಜಿಲ್ಲಾಧಿಕಾರಿ ಹೆಸ್ಕಾಂ ಅಧಿಕಾರಿಗಳಿಗೆ ಫೋನ ಮಾಡುವ ಮೂಲಕ ರೈತರಿಗೆ ವಿದ್ಯುತ್ ಕಲ್ಪಿಸುವಂತೆ ಆದೇಶ ಮಾಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಮಹಾರಾಜಗೌಡ ಪಾಟೀಲ, ಏಗನಗೌಡ ಮುದ್ದಿನಗೌಡರ, ಸದಾಶಿವ ಮಿರಜಕರ, ರಾಮಪ್ಪ ಲಮಾಣಿ, ಮಹಾಂತೇಶ ಅಳಗೊಡಿ, ಉಮೇಶಗೌಡ ಪಾಟೀಲ, ಮಾಯಪ್ಪ ಗೊರವನಕೊಳ್ಳ, ಕಿರಣ ಇನಾಮದಾರ, ಯಂಕಣ್ಣ ಇಂಚಲ, ವಿಠuಲ ಲಮಾಣಿ, ಇಮಾಮಸಾಬ ಸಣ್ಣಕ್ಕಿ, ಹುಸೇನಸಾಬ ಸಣ್ಣಕ್ಕಿ ಸವದತ್ತಿ ಹಾಗೂ ಉಗರಗೋಳ ರೈತರು ಭಾಗವಹಿಸಿದ್ದರು.
Advertisement
ಇದಕ್ಕೂ ಮೊದಲು ರೈತರು 10 ಗಂಟೆವರಗೆ ಕಾಯ್ದರೂ ಯಾವ ಇಲಾಖೆಯ ಅಧಿಕಾರಿಗಳು ಸ್ಪಂದಿಸದಿರುವದರಿಂದ ರೈತರು ರಸ್ತೆಗೆ ಮುಳ್ಳಿನ ಬೇಲಿ ಹಾಕಿ ಬಂದ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು.