Advertisement

ಕತ್ತೆಗೊಂದು ಕಾಲ…!ಹುಳಿಯಾರಿನಲ್ಲಿ ಕತ್ತೆ ಹಾಲಿಗೂ ಭಾರೀ ಬೇಡಿಕೆ

09:14 AM Sep 22, 2019 | sudhir |

ಹುಳಿಯಾರು: ಕತ್ತೆ ಹಾಲು ಬೇಕಾ ಕತ್ತೆ ಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಕಡಿಮೆಯಾಗುತ್ತೆ ಎಂದು ಕೂಗುತ್ತಿದ್ದಂತೆ ತಾಯಂದಿರು ಓಡೋಡಿ ಬಂದು ಹಾಲು ಖರೀದಿಸಿ ಮಕ್ಕಳಿಗೆ ಕುಡಿಸಿದರು.

Advertisement

ಹೌದು… ಇದು ಹುಳಿಯಾರಿನಲ್ಲಿ ಶನಿವಾರ ಕಂಡು ಬಂದ ದೃಶ್ಯ. ಕತ್ತೆಯನ್ನು ಜನರು ನಿಕೃಷ್ಟವಾಗಿ ಕಾಣುತ್ತಾರೆ. ಆದರೆ ಹುಳಿಯಾರಿನ ಜನರು ಕತ್ತೆ ಹಾಲು ಕುಡಿಯಲು ಆಸಕ್ತಿ ವಹಿಸಿರುವುದು ಅಚ್ಚರಿ ಸೃಷ್ಟಿಸಿದೆ. ಅಂದ ಹಾಗೆ ಕತ್ತೆ ಹಾಲು ಅರ್ಧ ಲೀಟರ್‌ನಷ್ಟು ಸಿಗುವುದಿಲ್ಲ. ಗ್ರಾಹಕರ ಎದುರೆ ಹಾಲು ಕರೆದು ಕೊಡಲಾಗುತ್ತದೆ. ಒಂದು ವಳಲೆ ಹಾಲಿಗೆ 50 ರೂ. ನಿಗದಿ ಮಾಡಿದ್ದಾರೆ.

ಒಂದು ಕತ್ತೆಯು ದಿನವೊಂದಕ್ಕೆ ಸುಮಾರು 300 ಎಂ.ಎಲ್‌. ನಿಂದ ಅರ್ಧ ಲೀಟರ್‌ ಹಾಲು ನೀಡುತ್ತದೆ . ಹಳ್ಳಿ ಹಳ್ಳಿ ತಿರುಗಿ ಮಾರಾಟ ಮಾಡಬೇಕು. ಹೆಚ್ಚೆಂದರೆ ದಿನಕ್ಕೆ 600ರಿಂದ 800 ರೂ ಸಂಪಾದಿಸುತ್ತೇವೆ . ಸದಾ ಇದನ್ನೇ ನಂಬುವುದೂ ಕಷ್ಟ. ಹೀಗಾಗಿ ಕೃಷಿ ಕೆಲಸಗಳಿಗೆ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತೇವೆ ಎನ್ನುತ್ತಾರೆ ಕತ್ತೆ ಮಾಲೀಕ ಹನುಮಂತಪ್ಪ.

ಕೃಷಿ ಕಸುಬು ಇಲ್ಲದಿದ್ದಾಗ ಪಟ್ಟಣಗಳಿಗೆ ತೆರಳಿ ಕತ್ತೆ ಹಾಲು ಮಾರುತ್ತೇವೆ .ಬೆಳಗ್ಗೆ 7ರಿಂದ 10 ರವರೆಗೆ ಕತ್ತೆಯ ಹಾಲು ಎಂದು ಕೂಗುತ್ತಾ ಮಾರಾಟಗಾರರು ಅಡ್ಡಾಡುತ್ತಾರೆ. ಆಸಕ್ತರು ಹಣ ನೀಡಿ ಸ್ಥಳದಲ್ಲಿಯೇ ಕತ್ತೆ ಹಾಲು ಕುಡಿಯುತ್ತಾರೆ. ಒಟ್ಟಾರೆ “ಕತ್ತೆಗೊಂದು ಕಾಲ’ ಎಂಬ ಮಾತು ಈಗ ಹಾಲು ಸೇವನೆಯಿಂದ ನಿಜವಾಗಿದೆ!.

Advertisement

Udayavani is now on Telegram. Click here to join our channel and stay updated with the latest news.

Next