Advertisement
ಕಳೆದ ಮೂರು ವರ್ಷದಿಂದ ರಾಜ್ಯ ಬರಕ್ಕೆ ತುತ್ತಾಗಿದ್ದು, ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿಗೆ ಪೂರಕವಾದ ಜಲ ಮೂಲಗಳ ಸಂರಕ್ಷಣೆಗೆ ಮುಂದಾಗುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. ಆದರೆ, ರಾಜ್ಯದ 15 ನೂರು ಕೆರೆಗಳ ಡಿನೋಟಿಫೈ ಮಾಡುವ ಮೂಲಕ ರಾಜ್ಯ ಸರ್ಕಾರ ಭೂಗಳ್ಳರ ಪಾಲು ಮಾಡಲು ಮುಂದಾಗಿದೆ. ಅಕ್ರಮ ಭೂ ದಂಧೆಕೋರರ ಲಾಬಿಗೆ ಮಣಿದು ಕೆರೆಗಳ ಡಿನೋಟಿಫೈ ಮಾಡುವುದು ಸರಿಯಲ್ಲ ಎಂದು ದೂರಿದರು. ಇಂದು ನೀರಿನ ಸಂಕ್ಷರಣೆ ಅನಿವಾರ್ಯವಾಗಿದೆ. ಈಗ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಕೃಷಿ ಭೂಮಿಯೆಲ್ಲ ಬಂಜರಾಗಲಿದೆ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರವಿದ್ದು, ಅಂತರ್ಜಲ ಪಾತಾಳ ಕಂಡಿದೆ. ರೈತ ಸಮುದಾಯ ಆತಂಕದ ಸ್ಥಿತಿಯಲ್ಲಿರುವ ವೇಳೆ ಕೆರೆಗಳನ್ನು ಡಿನೋಟಿಫೈ ಮಾಡಲು ಸರ್ಕಾರ ಹವಣಿಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ಕಿಶನ್‌ಸಿಂಗ್ ಠಾಕೂರ್, ಮಾನಸಿಂಗ್ ಠಾಕೂರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.