ಬಿಸಿಲ ಬೇಗೆ ಏರುತ್ತಿರುವಂತೆಯೇ ದೇಶಾದ್ಯಂತ ವಿದ್ಯುತ್ ಬಳಕೆ ಪ್ರಮಾಣವೂ ಏರತೊಡಗಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ವಿದ್ಯುತ್ಛಕ್ತಿ ಬೇಡಿಕೆಯು ಶೇ.10ರಷ್ಟು ಹೆಚ್ಚಾಗಿದ್ದು, 2021-22ರಲ್ಲಿ ಸರಬರಾಜಾದ ವಿದ್ಯುತ್ಛಕ್ತಿ ಮಟ್ಟವನ್ನೂ ಮೀರಿದೆ.
ಎರಡಂಕಿ ತಲುಪಲಿದೆಯೇ?
ಈ ಬೇಸಗೆಯಲ್ಲಿ ವಿದ್ಯುತ್ಛಕ್ತಿಗೆ ಹಿಂದೆಂದಿಗಿಂತಲೂ ಅಧಿಕ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಬಳಕೆ ಪ್ರಮಾಣವು ಎರಡಂಕಿಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಸಚಿವಾಲಯದ ಸೂಚನೆ
ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ವಿದ್ಯುತ್ಛಕ್ತಿಗೆ ಬೇಡಿಕೆ ವಿಪರೀತವಾಗಿ ಹೆಚ್ಚಲಿದೆ. ಹಾಗಂತ, ಲೋಡ್‌ಶೆಡ್ಡಿಂಗ್ ಅಥವಾ ವಿದ್ಯುತ್ ಕಡಿತದಂಥ ಕ್ರಮ ಕೈಗೊಳ್ಳಬೇಡಿ ಎಂದು ಕೇಂದ್ರ ವಿದ್ಯುತ್ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಜತೆಗೆ, ಇತರೆ ಉಷ್ಣವಿದ್ಯುತ್ ಸ್ಥಾವರಗಳಿಗೆ ಹೆಚ್ಚುವರಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವಂತೆಯೂ ತಿಳಿಸಿದೆ.
ಬೇಡಿಕೆ ಹೆಚ್ಚುತ್ತಿರುವುದೇಕೆ?
ಬೇಸಿಗೆಯಲ್ಲಿ ಬಿಸಿಲಿನ ಝಳ ತೀವ್ರಗೊಂಡಂತೆ, ಜನರು ಏರ್‌ಕಂಡಿಷನರ್, ಫ್ಯಾನ್ ಮುಂತಾದ ಕೂಲಿಂಗ್ ಸಾಧನಗಳ ಬಳಕೆಯನ್ನು ಹೆಚ್ಚಿಸುತ್ತಾರೆ. ಹೀಗಾಗಿ, ಸಹಜವಾಗಿಯೇ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚುತ್ತದೆ. ಇದಲ್ಲದೇ, ಆರ್ಥಿಕ ಚಟುವಟಿಕೆಗಳು ಹೆಚ್ಚಳವಾಗುವ ಕಾರಣ ವಾಣಿಜ್ಯ ಮತ್ತು ಕೈಗಾರಿಕೆಗಳ ವಿದ್ಯುತ್ಛಕ್ತಿ ಬೇಡಿಕೆಯೂ ಹೆಚ್ಚುತ್ತದೆ.
Related Articles
2021-22ರ ವಿತ್ತ ವರ್ಷದಲ್ಲಿ ಬಳಕೆಯಾದ ವಿದ್ಯುತ್- 1,374.02 ಶತಕೋಟಿ ಯುನಿಟ್
2021ರ ಏಪ್ರಿಲ್‌ನಿಂದ 2022ರ ಫೆಬ್ರವರಿವರೆಗಿನ ಅವಧಿಯಲ್ಲಿ ಬಳಕೆ- 1,245.54 ಶತಕೋಟಿ ಯೂನಿಟ್
2022ರ ಏಪ್ರಿಲ್‌ನಿಂದ 2023ರ ಫೆಬ್ರವರಿವರೆಗಿನ ಅವಧಿಯಲ್ಲಿ ಬಳಕೆ – 1,375.57 ಶತಕೋಟಿ ಯುನಿಟ್