ಚಿಕ್ಕೋಡಿ: ಕೇಂದ್ರಿಯ ವಿದ್ಯಾಲಯದಲ್ಲಿ ಶಿಕ್ಷಕರನ್ನು ನಿಯೋಜಿಸುವಂತೆ ಆಗ್ರಹಿಸಿ ವಿದ್ಯಾಲಯ ಮಕ್ಕಳ ಪಾಲಕರು ಪ್ರತಿಭಟನೆ ನಡೆಸಿ ಸರಕಾರವನ್ನು ಆಗ್ರಹಿಸಿದರು.
ಚಿಕ್ಕೋಡಿ ಹೊರವಲಯದಲ್ಲಿ ನಿರ್ಮಾಣವಾದ ಹೈಟಿಕ ಕೇಂದ್ರಿಯ ವಿದ್ಯಾಲಯದಲ್ಲಿ ಮೂಲಭೂತ ಸೌಲಭ್ಯ ಇದೆ. ಆದರೇ ಶಿಕ್ಷಕರ ಕೊರತೆ ಹೆಚ್ಚಿದೆ. ಪ್ರತಿ ವಿಷಯಕ್ಕೆ ಒಬ್ಬೋಬ್ಬರು ಶಿಕ್ಷಕರು ವಿದ್ಯಾಲಯದಲ್ಲಿ ಇರಬೇಕು.ಆದರೇ ಮಕ್ಕಳ ಸಂಖ್ಯೆ ಅನುಗುಣವಾಗಿ ಶಿಕ್ಷಕರ ಕೊರತೆ ಎದುರಾಗಿದೆ. ಕಾಯಂ ಪ್ರಾಚಾರ್ಯ ನಿಯೋಜನೆ ಮಾಡಬೇಕು. ಆನಲೈನ್ ಬಿಟ್ಟು ಆಫ್ಲೈನ್ ಕ್ಲಾಸ್ ನಡೆಸಬೇಕು ಎಂದು ಪಾಲಕರು ಒತ್ತಾಯಿಸಿದರು.
ವಿದ್ಯಾಲಯದಲ್ಲಿ ದೈಹಿಕ ಶಿಕ್ಷಕರು ಇದ್ದರೂ ಪ್ರಯೋಜನವಿಲ್ಲ. ಅವರಿಗೆ ಯಾವ ಆಟವು ಆಡಿಸಲು ಬರೋದಿಲ್ಲ.ಕೂಡಲೇ ಅವರನ್ನು ಬದಲಾಯಿಸಬೇಕು ಮತ್ತು ಪುಲ್ ಟೈಮ ಶಿಕ್ಷಕರನ್ನು ನೇಮಕ ಮಾಡಬೇಕು ಮತ್ತು ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಸ್ಥಳಕ್ಕೆ ಆಗಮೀಸಿದ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು. ನುರಿತ ಶಿಕ್ಷಕ ನಿಯೋಜನೆ ಮಾಡಲು ಸರಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದು ಭರವಸೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಗಣೇಶ ಹುಕ್ಕೇರಿ ಭೇಟಿ: ಚಿಕ್ಕೋಡಿ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ವಿದ್ಯಾಲಯ ಮಂಜೂರು ಮಾಡಿಕೊಂಡು ಬಂದಿದ್ದು. ವಿದ್ಯಾಲಯದಲ್ಲಿ ಮೂಲಭೂತ ಸೌಲಭ್ಯ ಒದಗಿಸಿದ್ದು. ಕೂಡಲೇ ನುರಿತ ಶಿಕ್ಷಕರ ನಿಯೋಜನೆ ಕ್ರಮ ವಹಿಸಲಾಗುತ್ತದೆ ಎಂದು ಪಾಲಕರಿಗೆ ಭರವಸೆ ನೀಡಿದರು.