Advertisement

ಸಮರ್ಪಕ ವಿದ್ಯುತ್‌ ಪೂರೈಕೆಗೆ ಆಗ್ರಹ

01:06 PM Feb 07, 2020 | Suhan S |

ಬೈಲಹೊಂಗಲ: ಸಮರ್ಪಕ ವಿದ್ಯುತ್‌ ಪೂರೈಕೆ ಮಾಡುವಂತೆ ಆಗ್ರಹಿಸಿ ಬುಡರಕಟ್ಟಿ, ಗೋವಿನಕೊಪ್ಪ, ಗುಡಕಟ್ಟಿ, ಮೂಗಬಸವ, ಏಣಗಿ, ಬೂ ಹಾಳ, ಉಡಕೇರಿ ಮತ್ತು ಸುತಮುತ್ತಿಲಿನ ಗ್ರಾಮದ ರೈತರು ಹೆಸ್ಕಾಂ ಬೈಲಹೊಂಗಲ ಶಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಹಲವು ದಿನಗಳಿಂದ ಬುಡರಕಟ್ಟಿ, ಗೋವಿನಕೊಪ್ಪ, ಗುಡಕಟ್ಟಿ, ಮೂಗಬಸವ ಸೇರಿದಂತೆ ವಿವಿಧ ಗ್ರಾಮಗಳಿಗೆ ದಿನಕ್ಕೆ 2 ಗಂಟೆಯು ಕರೆಂಟ್‌ ನೀಡುತ್ತಿಲ್ಲ. ಗ್ರಾಮಾಂತರ ಪ್ರದೇಶಗಳಿಗೆ 3 ಫೇಸ್‌ ಕರಂಟ್‌ನ್ನು 6 ಗಂಟೆಗಳ ಕಾಲ ನೀಡುವುದಾಗಿ ರಾಜ್ಯ ಸರ್ಕಾರ ಪ್ರತಿನಿತ್ಯ ಹೇಳುತ್ತಿದೆ. ಆದರೆ ನಮ್ಮ ಹಳ್ಳಿಗಳಿಗೆ ಎರಡು ಗಂಟೆಯೊ ಸಹ ವಿದ್ಯುತ್‌ ನೀಡುತ್ತಿಲ್ಲ ಎಂದು ಆರೋಪಿಸಿದರು.

ರೈತರು ತಮ್ಮ ಜಮೀನಿನಲ್ಲಿರುವ ತರಕಾರಿ ಹಾಗೂ ಇತರೆ ಬೆಳೆಗೆಳಿಗೆ ನೀರುಣಿಸಲು ಸಮರ್ಪಕ ವಿದ್ಯುತ್‌ ಇಲ್ಲದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದೆ. ಇಲ್ಲರಿವ ಸಮಸ್ಯೆ ಕುರಿತು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆಮಾಹಿತಿ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಶೀಘ್ರವೇ 6 ರಿಂದ 12 ತಾಸು 3 ಫೇಸ್‌ ಕರಂಟ್‌ನ್ನು ರೈತರಿಗೆ ನೀಡಬೇಕು. ಇಲ್ಲವಾದಲ್ಲಿ ವಿವಿಧ ಗ್ರಾಮದ ರೈತರಿಂದ ಬೈಲಹೊಂಗಲ ಹೆಸ್ಕಾಂ ಕಚೇರಿ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಹೆಸ್ಕಾಂ ಇಲಾಖೆಗೆ ಎಚ್ಚರಿಕ್ಕೆ ನೀಡಿದರು.  ಈ ಸಂದರ್ಭದಲ್ಲಿ ಮಹಾಂತೇಶ ಕಾಮತ ಅರವಿಂದ ಏಣಗಿ, ಈರಪ್ಪ ಹುಬಳ್ಳಿ, ಆಶೋಕ ದಳವಾಯಿ, ಗಂಗಪ್ಪ ಪೂಜಾರ, ಶಿವಾನಂದ ಸಂಗೊಳ್ಳಿ, ಸೋಮಲಿಂಗಪ್ಪ ಎಡ್ರಾವಿ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next