Advertisement

ಕಾರ್ಮಿಕ ಸಂಘದ ಚುನಾವಣೆ ನಡೆಸಲು ಆಗ್ರಹ

02:10 PM Jul 15, 2017 | |

ಹಟ್ಟಿಚಿನ್ನದಗಣಿ: ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಈಗಿನ ಅವಧಿ ಜು. 12ಕ್ಕೆ ಮುಕ್ತಾಯವಾಗಿದೆ. ಕೂಡಲೇ ಸಂಘಕ್ಕೆ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಆಗ್ರಹಿಸಿ ಟಿಯುಸಿಐ ಮುಖಂಡರು ಹಾಗೂ ಬೆಂಬಲಿತ ಕಾರ್ಮಿಕರು ಕ್ಯಾಂಪ್‌ ಬಸ್‌ ನಿಲ್ದಾಣದಿಂದ ಗಣಿ ಕಂಪನಿವರೆಗೆ ಮೆರವಣಿಗೆ ನಡೆಸಿದರು. 

Advertisement

ಗಣಿ ಕಂಪನಿ ಪ್ರಧಾನ ವ್ಯವಸ್ಥಾಪಕ ಡಾ| ಪ್ರಭಾಕರ ಸಂಗೂರಮಠ ಅವರಿಗೆ ಮನವಿ ಸಲ್ಲಿಸಿದ ಮುಖಂಡರು, ಕಾರ್ಮಿಕ ಸಂಘದ ಅವ ಧಿ ಮುಗಿಸಿರುವ ಎಐಟಿಯುಸಿ ಮುಖಂಡರಿಗೆ ಮನ್ನಣೆ ನೀಡಿ, ಅವರೊಂದಿಗೆ ಮಾತುಕತೆ ನಡೆಸಿದರೆ ಗಣಿ ಕಂಪನಿಯಲ್ಲಿ ಮುಂದೆ ಆಗುವ ಗೊಂದಲಕ್ಕೆ ಆಡಳಿತವರ್ಗವೇ ಕಾರಣವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಹಾಲಿ ಎಐಟಿಯುಸಿ ಮುಖಂಡರು ಬೆಂಗಳೂರಲ್ಲಿ ಜು. 5ರಂದು ಸಭೆ ನಡೆಸಿ ಜು. 12ಕ್ಕೆ ಅವಧಿ ಮುಕ್ತಾಯವಾಗಲಿದೆ. ಚುನಾವಣೆ ನಡೆಸಲು ಆಡಳಿತವರ್ಗಕ್ಕೆ ಪತ್ರ
ಸಲ್ಲಿಸಲಾಗುವುದು ಎಂದು ಕರಪತ್ರದಲ್ಲಿ ತಿಳಿಸಿದ್ದಾರೆ. ಹಾಗಾಗಿ ಟಿಯುಸಿಐ ಸಂಘಟನೆ ಜು. 13ರಂದು ಧಾರುವಾಲ ಕ್ರೀಡಾಂಗಣದಲ್ಲಿ
ಸಭೆ ನಡೆಸಿ ಸಂಘದ ಚುನಾವಣೆ ಸಂಬಂಧ ಕೆಲವೊಂದು ತೀರ್ಮಾನ ಕೈಗೊಂಡಿದೆ. ಸಂಘದ ಈಗಿನ ಪದಾಧಿಕಾರಿಗಳ ಅವಧಿ
ಮುಗಿದಿದ್ದರಿಂದ ಚುನಾವಣೆ ನಡೆಸಲು ಗಣಿ ಆಡಳಿತ ವರ್ಗ ಮುಂದಾಗಬೇಕು ಹಾಗೂ ಅವರೊಂದಿಗೆ ಮಾತುಕತೆ ನಡೆಸಬಾರದು.
ಚುನಾವಣಾ ಧಿಕಾರಿಯನ್ನಾಗಿ ಕಲುಬುರಗಿ ಕಾರ್ಮಿಕ ಆಯಕ್ತರನ್ನು ಬೆಂಗಳೂರಿನ ಆಯುಕ್ತರು ನೇಮಕ ಮಾಡಿ ಆದೇಶ
ನೀಡಿದ್ದಾರೆ. ಈ ಸಂಬಂಧ ರಾಯಚೂರಿನಲ್ಲಿ ಜೂ. 23ರಂದು ಸಭೆ ಸಹ ನಡೆದಿದೆ. ಆದಷ್ಟು ಬೇಗ ಗಣಿ ಆಡಳಿತವರ್ಗ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಚುನಾವಣೆ ಪ್ರಕ್ರಿಯೆ ಆರಂಭಿಸಲು ತಡವಾದರೆ ನಮ್ಮ ಸಂಘಟನೆ ವತಿಯಿಂದ ಜು. 20ರಂದು ಕಂಪನಿ ಮುಖ್ಯದ್ವಾರದ ಎದುರು ಒಂದು ದಿನದ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿರುವ ಮುಖಂಡರು, ಈಗಿನ ಕಾರ್ಮಿಕ ಸಂಘದ ಮುಖಂಡರು ಜು.
12ರಂದು ಸಭೆ ನಡೆಸಿ, ಜು. 27ರಂದು ಒಂದು ದಿನದ ಮುಷ್ಕರ ನಡೆಸುವುದಾಗಿ ಹೇಳಿ ಪ್ರಕಟಣೆ ಹೊರಡಿಸಿದ್ದಾರೆ.

ಈ ಮುಷ್ಕರಕ್ಕೆ ಟಿಯುಸಿಐ ಬೆಂಬಲವಿರುವುದಿಲ್ಲ ಹಾಗೂ ಇದನ್ನು ವಿರೋಧಿ ಸಿ ಸಂಘಟನೆ ಕಾರ್ಮಿಕರು ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮುಖಂಡರಾದ ವಾಲೆಬಾಬು, ಎಂ.ಡಿ. ಅಮೀರಅಲಿ, ದುರುಗಪ್ಪ, ರೇವಣಸಿದ್ದಪ್ಪ, ಇಮಾಮ್‌ಸಾಬ, ಸೋಮಣ್ಣ ಜವಳಗೇರಾ, ಗುಡುದಪ್ಪ, ಗಂಗಪ್ಪ ಗಲಗ, ಕೆ.ಎಸ್‌. ಶಿವಾನಂದ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next