Advertisement

37 ಸಾವಿರ ಸಸಿಗಳಿಗೆ ಬೇಡಿಕೆ!

12:34 PM May 23, 2017 | |

ಬೆಂಗಳೂರು: ನಗರದ ಜನತೆ ಬಯಸುವ ಗಿಡಗಳನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲು ಅನುಕೂಲ­ವಾಗುವಂತೆ ಬಿಬಿಎಂಪಿ ಅಭಿವೃದ್ಧಿಪಡಿಸಿರುವ “ಗ್ರೀನ್‌ ಆ್ಯಪ್‌’ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಎರಡೇ ದಿನದಲ್ಲಿ 1647 ಮಂದಿಯಿಂದ 37,000 ಗಿಡಗಳಿಗೆ ಬೇಡಿಕೆ ಬಂದಿದೆ.

Advertisement

ನಗರದಲ್ಲಿ ಈ ಬಾರಿ 10 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಿರುವ ಪಾಲಿಕೆಯು ಜನ ಗಿಡ ನೆಡುವುದನ್ನು ಪ್ರೋತ್ಸಾಹಿಸಲು ಉಚಿತವಾಗಿ ಬಯಸಿದ ಗಿಡ ಪೂರೈಸಲು ಮುಂದಾಗಿದೆ. ಈ ವಿನೂತನ ವ್ಯವಸ್ಥೆಗೆ ದೇಶ- ವಿದೇಶಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಾಲಿಕೆ ಅಭಿವೃದ್ಧಿಪಡಿಸಿರುವ “ಗ್ರೀನ್‌ ಆ್ಯಪ್‌’ ಡೌನ್‌ಲೋಡ್‌ ಮಾಡಿಕೊಳ್ಳುವವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಈ ಪೈಕಿ 1647 ಮಂದಿಯಿಂದ ಒಟ್ಟು 37,026 ಸಸಿಗಳಿಗೆ ಬೇಡಿಕೆ ಬಂದಿದೆ. ಮುಖ್ಯವಾಗಿ ಹೊಂಗೆ, ಸಂಪಿಗೆ, ನೇರಳೆ ಸಸಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಜನರು ಬಯಸಿದ ಸಸಿಗಳನ್ನು ತ್ವರಿತವಾಗಿ ಪೂರೈಸಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಬಿಬಿಎಂಪಿ ಅಭಿವೃದ್ಧಿಪಡಿಸಿರುವ “ಗ್ರೀನ್‌ ಆ್ಯಪ್‌’ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಪಾಲಿಕೆಯಿಂದ 10 ಲಕ್ಷ ಸಸಿಗಳನ್ನು ಉಚಿತವಾಗಿ ನೀಡುವ ಗುರಿಯಿದೆ. ಸದ್ಯದ ಸ್ಪಂದನೆ ಗಮನಿಸಿದರೆ 10ಲಕ್ಷ­ಕ್ಕಿಂತಲೂ ಹೆಚ್ಚು ಸಸಿಗಳಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ. ಒಂದೊಮ್ಮೆ ಹೆಚ್ಚಿನ ಸಸಿಗಳಿಗೆ ಬೇಡಿಕೆ ಬಂದರೆ ಇತರೆ ಜಿಲ್ಲೆಗಳಿಂದ ಪಡೆದು ಪೂರೈಸಲಾಗುವುದು ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಗಿಡಗಳಿಗಾಗಿ ಸಾರ್ವಜನಿಕರಿಂದ ಬಂದ ಬೇಡಿಕೆಗಳು
* ಹೊಂಗೆ-4101
* ಮಹಾಗನಿ-2902 
* ಕಾಡು ಬಾದಾಮಿ-2787
* ತಪಸಿ-1827
* ನೇರಳೆ-3081
* ನೆಲ್ಲಿ-2858
* ಹೊಳೆ ದಾಸವಾಳ-2081
* ಬೇವು-3480
* ಹೂವರಸಿ-1681
* ರೋಸಿಯಾ-1832
* ಬಸವನ ಪಾದ-1761
* ಸಂಪಿಗೆ-3137
* ಜಕರಾಂಡ-1948
* ಗೈಕಾನ-1718
* ಸಿಮರೋಬಾ-1832

Advertisement
Advertisement

Udayavani is now on Telegram. Click here to join our channel and stay updated with the latest news.

Next