ಹಳಿಯಾಳ: ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈ ಹಿಂದೆ ರೈತರು ಕಂಪೆನಿ ಎದುರಿಗೆ ತಿಂಗಳು ಗಟ್ಟಲೇ ಹೋರಾಟ ನಡೆಸಿದಾಗ ಅವರ ಮೇಲೆ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಪ್ರಕರಣ ದಾಖಲಿಸಿದಾಗ ಸ್ಥಳೀಯ ಶಾಸಕರಿಗೆ ನೋವಾಗಲಿಲ್ಲ. ಆದರೆ ವಿಪ ಸದಸ್ಯ ಎಸ್.ಎಲ್. ಘೋಕ್ಲೃಕರ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ದೇಶಪಾಂಡೆ ಮನಸ್ಸಿಗೆಘಾಸಿಯಾಗುತ್ತಿದೆ. ಇದು ರೈತರ ಮೇಲೆ ದೇಶಪಾಂಡೆ ಅವರಿಗಿರುವ ಕಾಳಜಿ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ವ್ಯಂಗ್ಯವಾಡಿದರು.
ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ 2800 ರೂ. ಬೆಲೆ ನಿಗದಿ ಮಾಡಬೇಕು ಹಾಗೂ ಡಿ.17 ರಂದು ಕಾರ್ಖಾನೆ ವಿರುದ್ಧ ನಡೆದ ರಾಜಕೀಯ ಪ್ರೇರಿತ ಬಂದ್ ಮಾಡಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುನೀಲ್ ಹೆಗಡೆನೇತೃತ್ವದಲ್ಲಿ ಬಿಜೆಪಿ ಘಟಕದವರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು.
ಶಾಸಕ ಆರ್.ವಿ. ದೇಶಪಾಂಡೆ ರೈತರ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಾರೆ. ಈ ಹಿಂದೆರೈತರು ನಡೆಸಿದ ಹೊರಾಟಕ್ಕೆ ಪ್ರತಿಯಾಗಿ ಸಕ್ಕರೆ ಕಾರ್ಖಾನೆ ರೈತರ ಮೇಲೆ ಪ್ರಕರಣ ದಾಖಲಿಸಿತ್ತು.ರೈತರ ಹೋರಾಟದ ಸಂದರ್ಭದಲ್ಲಿ ಅವರ ಅಹವಾಲುಗಳನ್ನು ಆಲಿಸಲು ಬರದೇ ರೈತ ವಿರೋಧಿ ಧೋರಣೆ, ತಮ್ಮ ಉದಾಸೀನತೆ ಪ್ರದರ್ಶಿಸಿದದೇಶಪಾಂಡೆ ಇಂದು ರಾಜಕೀಯ ಪ್ರೇರಿತವಾಗಿತನ್ನ ಹಿತಾಸಕ್ತಿಗಾಗಿ ಘೋಕ್ಲೃಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಂತೆ ದೇಶಪಾಂಡೆ ಕಾರ್ಖಾನೆ ವಿರುದ್ಧ ಹೇಳಿಕೆ ನೀಡಿರುವುದು ವಿಪರ್ಯಾಸ ಎಂದು ಟೀಕಾಪ್ರಹಾರ ಮಾಡಿದರು.
ರೈತರ ಜೀವನಾಡಿ ಸಕ್ಕರೆ ಕಾರ್ಖಾನೆಯನ್ನು ನಂಬಿ ಹಳಿಯಾಳ ಸೇರಿದಂತೆ ಅಕ್ಕಪಕ್ಕದಲ್ಲಿ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆದಿರುವ ಕಾರಣ ಕಂಪೆನಿಯು ರೈತರಿಗೆ ನೆರವಾಗಬೇಕಿದೆ. ಕಬ್ಬು ಬೆಳೆಗಾರರ ಹಿತ ರಕ್ಷಣೆಗಾಗಿ ಕಾರ್ಖಾನೆಯವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕಾಗಿದ್ದು, ರೈತರ ಸಂಕಷ್ಟಗಳಿಗಾಗಿ ಸ್ಪಂದಿಸಬೇಕಾಗಿದೆ ಎಂದು ಕರೆ ನೀಡಿದರು.
ಇನ್ನು ಮುಂದೆ ಕಂಪೆನಿ ವಿರುದ್ಧ ಸ್ವಾರ್ಥ ಸಾಧನೆಗೆ, ವೈಯಕ್ತಿಕ ರಾಜಕಾರಣಕ್ಕಾಗಿ ಪ್ರತಿಭಟನೆ ಅಥವಾಬಂದ್‌ಗಳನ್ನು ಮಾಡಿದರೆ ಅಂತಹವರ ವಿರುದ್ಧ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಸಕ್ತ ಸಾಲಿನಲ್ಲಿ ಪೂರೈಸುವ ಕಬ್ಬಿಗೆ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚುವರಿ 200 ರೂ. ದರ ನೀಡಬೇಕು. ತಾಲೂಕಿನಲ್ಲಿ ಬೆಳೆಯುವಂತಹ ಕಬ್ಬು ಬೆಳೆಯುವ ಇಳುವರಿ ಪ್ರಮಾಣ ಶೇಕಡಾ 12 ಕ್ಕಿಂತಲು ಜಾಸ್ತಿ ಬರುವುದರಿಂದ ರೈತರಿಗೆ ಉತ್ತಮ ದರ ನೀಡಬೇಕು ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಅಧ್ಯಕ್ಷ ಗಣಪತಿ ಕರಂಜೇಕರ, ಅನಿಲ್ ಮುತ್ನಾಳೆ, ಶಿವಾಜಿ ನರಸಾನಿ, ಉದಯಹೂಲಿ, ಚಂದ್ರಕಾಂತ ಕಮ್ಮಾರ, ವಾಸು ಪುಜಾರಿ,ಜಯ ಲಕ್ಷ್ಮೀ ಚವ್ಹಾಣ, ರಾಜೇಶ್ವರಿ ಹಿರೇಮಠ,ಸಂತೋಷ ಘಟಕಾಂಬಳೆ, ಶಾಂತಾ ಹಿರೆಕರ, ವಿಲಾಸ ಯಡವಿ, ಯಲ್ಲಪ್ಪಾ ಹೊನ್ನೋಜಿ ಇತರರು ಇದ್ದರು.