Advertisement

ಬೇಡಿಕೆ ಕುದುರಿಸಿಕೊಂಡ 500, 2 ಸಾವಿರ ನೋಟು; ಕೇಂದ್ರ ಸರಕಾರದಿಂದಲೇ ಈ ಬಗ್ಗೆ ಮಾಹಿತಿ

02:09 AM Dec 24, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ನೋಟು ಅಮಾನ್ಯ ಮಾಡಿ ಐದು ವರ್ಷಗಳು ಪೂರ್ತಿ­ಗೊಂಡರೂ, ಒಟ್ಟು ಕರೆನ್ಸಿ ನೋಟುಗಳ ಚಲಾವಣೆಯಲ್ಲಿ 500 ರೂ., 2 ಸಾವಿರ ರೂ. ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯಲ್ಲಿ ಇವೆ. ಈ ಬಗ್ಗೆ ಕೇಂದ್ರ ಸರಕಾರವೇ ಇತ್ತೀಚೆಗೆ ಸಂಸತ್‌ಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದೆ.

Advertisement

ಈ ಎರಡೂ ಮುಖಬೆಲೆಯ ನೋಟುಗಳ ಬೇಡಿಕೆ ಪ್ರಮಾಣ ಶೇ.85.7­ರಷ್ಟಾಗಿದೆ. ನೋಟು ಅಮಾನ್ಯಗೊಳಿಸುವುದಕ್ಕೆ ಮೊದಲು ಅಂದರೆ 2016ರಲ್ಲಿ ಹೆಚ್ಚು ಮೌಲ್ಯ ಇರುವ ನೋಟುಗಳ ಬೇಡಿಕೆ ಪ್ರಮಾಣ ಶೇ.86.4 ಆಗಿತ್ತು. ಇದರಿಂದಾಗಿ ಹೆಚ್ಚು ಮೌಲ್ಯದ ನೋಟುಗಳ ಚಲಾವಣೆ ಪ್ರಮಾಣ ಮತ್ತೆ ಹೆಚ್ಚಾದಂತಾಗಿದೆ.

ನೋಟು ಅಮಾನ್ಯದ ಸಂದರ್ಭದಲ್ಲಿ ಹಳೆಯ 500 ರೂ. ಮತ್ತು 1 ಸಾವಿರ ರೂ. ನೋಟುಗಳು ವಾಪಸ್‌ ಪಡೆದ ಬಳಿಕ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಸಂಖ್ಯೆ 2017ರ ಜನವರಿಯಲ್ಲಿ 7.8 ಲಕ್ಷ ಕೋಟಿ ರೂ.ಗೆ ತಗ್ಗಿತ್ತು.

ಇದನ್ನೂ ಓದಿ:ಮೀನುಗಾರರ ಬಲೆಯಲ್ಲಿ ಸಿಲುಕಿದ್ದ ವಿಶ್ವದ ಅತಿ ದೊಡ್ಡ ಮೀನಿನ ರಕ್ಷಣೆ!

500 ರೂ. ನೋಟಿನ ಚಲಾವಣೆ ಪ್ರಮಾಣ 2019ರ ಮಾರ್ಚ್‌ನಲ್ಲಿ ಶೇ.19.8 ಇದ್ದದ್ದು ಈ ವರ್ಷದ ಮಾರ್ಚ್‌ನಲ್ಲಿ ಶೇ.31.1ಕ್ಕೆ ಏರಿಕೆ­ಯಾಗಿದೆ.

Advertisement

ಆರ್‌ಬಿಐ ವರದಿಯ ಪ್ರಕಾರ ಕೊರೊನಾ ಸಂಬಂಧಿತ ಸಮಸ್ಯೆಯ ಪ್ರಭಾವ­ದಿಂದಾಗಿ ನೋಟುಗಳ ಚಲಾವಣೆಯಲ್ಲಿ ಕೊಂಚ ಏರಿಕೆಯಾಗಿದೆ. ಅದಕ್ಕೆ ಪೂರಕವಾಗಿ ಡಿಜಿಟಲ್‌ ಪಾವತಿಯೂ ಹೆಚ್ಚಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next