Advertisement

ಗ್ರಂಥಾಲಯಕ್ಕೆ ಪುಸ್ತಕ, ಶಾಲೆಗೆ ಕ್ರೀಡಾಪರಿಕರ ನೀಡುವಂತೆ ವಿದ್ಯಾರ್ಥಿಗಳಿಂದ ಬೇಡಿಕೆ

11:51 PM Nov 28, 2019 | Team Udayavani |

ಕೋಟ: ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ 2019-20ನೇ ಸಾಲಿನ ಮಕ್ಕಳ, ಮಹಿಳೆಯರ ಮತ್ತು ಕಿಶೋರಿಯರ ಗ್ರಾಮಸಭೆ ನ.28ರಂದು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ ಅಧ್ಯಕ್ಷತೆಯಲ್ಲಿ ಕಾರಂತ ಕಲಾಭವನದಲ್ಲಿ ನಡೆಯಿತು.

Advertisement

ಶಾಲೆಯಲ್ಲಿ ಸಾಕಷ್ಟು ಕಸ ಉತ್ಪತ್ತಿಯಾಗುತ್ತದೆ. ಆದರೆ ಇದನ್ನು ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಇಲ್ಲ. ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಕೋಟತಟ್ಟು ಪಡುಕರೆ ಶಾಲೆಯ ನಿಶಾ ವಿನಂತಿಸಿದಳು. ಒಣಕಸ ವಿಲೇವಾರಿಗೆ ಈಗಾಗಲೇ ಪಂಚಾಯತ್‌ ವತಿಯಿಂದ ಕ್ರಮಕೈಗೊಳ್ಳಲಾಗಿದೆ. ಮುಂದೆ ಶಾಲೆಗಳಿಂದಲೂ ಕಸ ವಿಲೇವಾರಿಗೆ ಕ್ರಮಕೈಗೊಳ್ಳಲಾಗುವುದು ಎಂದು ಪಂಚಾಯತ್‌ ಮುಖ್ಯಸ್ಥರು ತಿಳಿಸಿದರು.

ಶಾಲೆ ಗ್ರಂಥಾಲಯಕ್ಕೆ ಗ್ರಾ.ಪಂ. ವತಿಯಿಂದ ಪುಸ್ತಕ ಹಾಗೂ ಕ್ರೀಡಾಚಟುವಟಿಕೆಗೆ ಕ್ರೀಡೋಪಕರಣ ನೀಡಬೇಕು ಎಂದು ಕೋಟ ಶಾಲೆಯ ಸಿಂಚನಾ ಮತ್ತು ಪ್ರಜ್ವಲ್‌ ಮನವಿ ಮಾಡಿದರು. ಗ್ರಾ.ಪಂ. ಅನುದಾನದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಲಾಯಿತು.

ಪಂಚಾಯತ್‌ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ದಾರಿದೀಪವಿಲ್ಲದೆ ಸಂಚರಿಸಲು ಸಮಸ್ಯೆಯಾಗುತ್ತಿದೆ ಎಂದು ವಿದ್ಯಾರ್ಥಿ ಹೃಸೇನ ಮನವಿ ಮಾಡದ. ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಪಂಚಾಯತ್‌ ಮುಖ್ಯಸ್ಥರು ತಿಳಿಸಿದರು.

ಈ ಸಂದರ್ಭ ಪಂಚಾಯತ್‌ ವತಿಯಿಂದ ಶೇಕಡಾ 3ರ ಅನುದಾನದಡಿ ವಿಶೇಷ ಚೇತನರಿಗೆ ಸಹಾಯಧನ, ಶೇಕಡಾ 25ರ ಸಹಾಯಧನ ಮತ್ತು ಶೇಕಡಾ 2ರ ಕ್ರೀಡಾ ಪ್ರೋತ್ಸಾಹ ಸಹಾಯಧನ ವಿತರಿಸಲಾಯಿತು..

Advertisement

ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಮಕ್ಕಳಿಗೆ ಕಾನೂನು ಮಾಹಿತಿ ನೀಡಿದರು.

ಸಭೆಯ ಸಮನ್ವಯಾಧಿಕಾರಿ ಡಾ| ಅರುಣ್‌ ಕುಮಾರ್‌ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷ ಲೋಕೇಶ್‌ ಶೆಟ್ಟಿ, ಸದಸ್ಯ ಸತೀಶ್‌, ವಾಸು ಪೂಜಾರಿ, ಸುಜಾತ, ಪಾರ್ವತಿ, ಶ್ಯಾಮಲ ಪಿ. ಹಾಗೂಮಕ್ಕಳ ತಜ್ಞ ಡಾ| ಅಮರನಾಥ ಶಾಸ್ತ್ರಿ, ಶಿಶು ಕಲ್ಯಾಣ ಇಲಾಖೆಯ ಮುಖ್ಯಸ್ಥೆ ಲಕ್ಷ್ಮೀ, ಕಿರಿಯ ಆರೋಗ್ಯ ಸಹಾಯಕ ಹರಿಶ್ಚಂದ್ರ ನಾಯ್ಕ, ಆಶಾ ಕಾರ್ಯಕರ್ತೆಯರು, ಸ್ಥಳೀಯ ವಿವೇಕ ವಿದ್ಯಾ ಸಂಸ್ಥೆ, ಕೋಟ ಹಾಗೂ ಕೋಟತಟ್ಟು ಪಡುಕರೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಸ್ತೆ ಸಮಸ್ಯೆ, ದಾರಿದೀಪ, ಕಸದ ಸಮಸ್ಯೆ ಪ್ರಸ್ತಾಪ
ಮಣೂರು-ಪಡುಕರೆಯ ಮೀನುಗಾರಿಕೆ ರಸ್ತೆ ಸಂಪೂರ್ಣ ಹಡಗೆಟ್ಟಿದ್ದು ಸಂಚಾರಿಸಲು ಅಸಾಧ್ಯವಾಗಿದೆ ಆದ್ದರಿಂದ ಇದರ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಕೋಟತಟ್ಟು ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಆಶಿತಾ ವಿನಂತಿಸಿದಳು. ರಸ್ತೆ ದುರಸ್ತಿಯ ಸಲುವಾಗಿ ಸ್ಥಳಪರಿಶೀಲಿಸಿ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ ಎಂದು ಅಧ್ಯಕ್ಷರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next