Advertisement

ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್‌ ವಿತರಣೆ ಶ್ಲಾಘನೀಯ

07:55 PM Jul 07, 2021 | Nagendra Trasi |

ಮುದ್ದೇಬಿಹಾಳ: ಕೊರೊನಾದಿಂದ ಕಾರ್ಮಿಕರ ಜೀವನ ಸಂಕಷ್ಟದಲ್ಲಿದೆ. ಇವರ ಸಂಕಷ್ಟಕ್ಕೆ ನೆರವಾಗಲು ಸರ್ಕಾರ ಕಾರ್ಮಿಕ ಇಲಾಖೆ ಮೂಲಕ ಆಹಾರ ಧಾನ್ಯಗಳ ಕಿಟ್‌ ವಿತರಿಸಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದು ಜೆಎಂಎಫ್‌ಸಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಯವರೂ ಆಗಿರುವ ಸುರೇಶ ಸವದಿ ಹೇಳಿದರು.

Advertisement

ಕೋರ್ಟ್‌ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರ ಮತ್ತು ಕಾರ್ಮಿಕ ಇಲಾಖೆ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆಹಾರ ಧಾನ್ಯ ಕಿಟ್‌ ಮತ್ತು ಸುರಕ್ಷತಾ ಸಾಮಗ್ರಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಮಿಕರು ನೆಮ್ಮದಿಯ ಜೀವನ ನಡೆಸಲು ತಮಗಾಗಿ ಇರುವ ಕಾನೂನುಗಳ ತಿಳಿವಳಿಕೆ ಹೊಂದಿರಬೇಕು ಎಂದು ಹೇಳಿದರು. ಹಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧೀಶರು ಆಗಿರುವ ಸಮಿತಿ ಅಧ್ಯಕ್ಷರಾದ ಲಕ್ಷ್ಮೀ ಗರಗ ಕಾರ್ಯಕ್ರಮ ಉದ್ಘಾಟಿಸಿ ಕಿಟ್‌ ವಿತರಣೆಗೆ ಚಾಲನೆ ನೀಡಿದರು. ತಹಶೀಲ್ದಾರ್‌ ಬಿ.ಎಸ್‌. ಕಡಕಭಾವಿ, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್‌. ಕ್ವಾರಿ, ಕಾರ್ಮಿಕ ನಿರೀಕ್ಷಕ ಐ.ಎಚ್‌. ಇನಾಮದಾರ, ಸಮಾಜ ಕಲ್ಯಾಣ ಇಲಾಖೆಯ ಎಸ್‌.ಎಚ್‌. ಜೈನಾಪುರ ವೇದಿಕೆಯಲ್ಲಿದ್ದರು.

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಅಧ್ಯಕ್ಷೆ ನಿರ್ಮಲಾ ಪುರಾಣಿಕಮಠ, ಸರಸ್ವತಿ ಪಿರಾಪುರ, ನೀಲಮ್ಮ ಚಲವಾದಿ, ರುದ್ರಮ್ಮ ಮಂಕಣಿ, ಗಂಗಮ್ಮ ತೋಟದ, ರಾಜು ಬಳ್ಳೊಳ್ಳಿ, ರಾಜಶೇಖರ ಮ್ಯಾಗೇರಿ, ಹನುಮಂತ ಕಲ್ಯಾಣಿ, ಹನುಮಂತ ನಲವಡೆ, ನಾಗೇಶ ಕವಡಿಮಟ್ಟಿ, ಮಹಾಂತೇಶ ಹಡಪದ, ಮಹಿಬೂಬ ಜಾಲಗಾರ, ಮಹಿಬೂಬ ಕುಂಟೋಜಿ, ಕಲ್ಪನಾ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಮಿಕ ಬಂಧು ರಾಜು ದಂಡಾವತಿ ನಿರೂಪಿಸಿದರು.

ಇದ್ದದ್ದು 19000, ಬಂದದ್ದು 4000: ಇಲ್ಲಿನ ಕಾರ್ಮಿಕ ಇಲಾಖೆಯಡಿ ಒಟ್ಟು 19,000 ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಇಲಾಖೆಯಿಂದ ಉಚಿತವಾಗಿ ವಿತರಿಸಲು ಬಂದಿದ್ದು ಕೇವಲ 4000 ಕಿಟ್‌ ಮಾತ್ರ. ಇನ್ನುಳಿದ 15000 ಜನರಿಗೆ ಕಿಟ್‌ ಸೌಲಭ್ಯ ಸಿಗದಂತಾಗಿದೆ. ಈ ಬಗ್ಗೆ ಕಾರ್ಮಿಕ ನಿರೀಕ್ಷಕ ಇನಾಮದಾರ ಅವರನ್ನು ಕೇಳಿದರೆ ಬಂದಿದ್ದೇ ಅಷ್ಟು. ನಾವೇನು ಮಾಡೋಕಾಗೊಲ್ಲ. 4000 ಕಿಟ್‌ಗಳನ್ನು ಯಾರು ಅರ್ಹರಿದ್ದಾರೋ ಅಂಥವರಿಗೆ ಮಾತ್ರ ವಿತರಿಸಲಾಗುತ್ತದೆ. ಇದು ಮುದ್ದೇಬಿಹಾಳ ತಾಲೂಕಿನ ಸಮಸ್ಯೆಯೊಂದೇ ಅಲ್ಲ ಜಿಲ್ಲೆಯ ಎಲ್ಲ ತಾಲೂಕುಗಳ ಸಮಸ್ಯೆ ಆಗಿದೆ. ಆದ್ಧರಿಂದ ಅತ್ಯಂತ ಕಷ್ಟದಲ್ಲಿರುವ ಕಟ್ಟಡ, ನಿರ್ಮಾಣ ಕಾರ್ಮಿಕರಿಗೆ ಮಾತ್ರ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next