Advertisement

ಮಕ್ಕಳಲ್ಲಿ  ಪೌಷ್ಟಿಕಾಂಶ ಹೆಚ್ಚಲು ಚಾಕ್ಲೆಟ್‌, ಮಿಲ್ಲೆಟ್‌ ವಿತರಣೆ

08:23 PM Jun 15, 2021 | Team Udayavani |

ತುಮಕೂರು: ಕೊರೊನಾ 3ನೇ ಅಲೆ ಮಕ್ಕಳಿಗೆಅಪಾಯ ತಂದೊಡ್ಡಲಿರುವ ಇಂತಹ ಸಮಯದಲ್ಲಿಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಚಾಕೊಲೇಟ್‌ ಹಾಗೂಮಿಲ್ಲೆಟ್‌ ಪೌಡರ್‌ ಮಕ್ಕಳಿಗೆ ಬಹಳಷ್ಟು ಸಹಕಾರಿಎಂದು ಯೋಗಬಾರ್‌ ಸಂಸ್ಥೆಯ ಸದಸ್ಯರಾದಯಶಸ್ವಿನಿ ತಿಳಿಸಿದರು.

Advertisement

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಸಂಸ್ಥೆ ಮತ್ತುಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಹಾಗೂಬೆಂಗಳೂರು ಕೆಂಗೇರಿ ಯೋಗ ಬಾರ್‌ ಸೌ³›ಟ್‌ ಲೈಫ್ಫ‌ುಡ್ಸ್‌ ಪೈÅವೇಟ್‌ ಲಿ. ಹಾಗೂ ಯೋಗ ಬಾರ್‌ ನ ಪ್ರವೀಣ್‌ಹತ್ತಿ ವತಿಯಿಂದ ಪೌರಕಾರ್ಮಿಕರು, ಬಡ ಮಕ್ಕಳು,ಅಲೆಮಾರಿಗಳು ಹಾಗೂ ಅನಾಥ ಮಕ್ಕಳಿಗೆ ನೆರವಿನಸಹಾಯಹಸ್ತ ನೀಡುವ ಸಲುವಾಗಿ ಮಕ್ಕಳಿಗೆಪೌಷ್ಟಿಕಾಂಶವುಳ್ಳ ಚಾಕೊಲೇಟ್‌ ಹಾಗೂ ಮಿಲ್ಲೆಟ್‌ಪೌಡರ್‌ ಬಿಸ್ಕೆಟ್‌ ವಿತರಣೆ ಕಾರ್ಯ ಕ್ರಮದಲ್ಲಿ ಮಾತ ನಾಡಿ ದರು. ಕಂಪನಿ ವತಿಯಿಂದ ನೀಡಲಾಗಿರುವ ಕಿಟ್‌ಅನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಮಕ್ಕಳಿಗೆಹಂಚುವ ಗುರಿ ಹೊಂದಲಾಗಿದೆ ಎಂದರು.

ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಿ: ಅಧ್ಯಕ್ಷತೆ ವಹಿಸಿದ್ದಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆಯಉಪಾಧ್ಯಕ್ಷರಾದ ಉಪ್ಪಾರಹಳ್ಳಿ ಕುಮಾರ್‌ ಮಾತನಾಡಿ,ಅಪೌಷ್ಟಿಕತೆಯಿಂದ ಕೂಡಿರುವ ಮಕ್ಕ ಳಲ್ಲಿ ಪೌಷ್ಟಿಕಾಂಶಹೆಚ್ಚಿಸಬೇಕು ಎಂದು ನುಡಿದರು.ಅಭಿನಂದನೆ ಸಲ್ಲಿಕೆ: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ನಸ್ಥಾನಿಕ ಆಯುಕ್ತರಾದ ವೇಣುಗೋಪಾಲ್‌ ಕೃಷ್ಣಮಾತನಾಡಿ, ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಕಿಟ್‌ದಾನಿಗಳಾದ ಯೋಗ ಬಾರ್‌ ಸಂಸ್ಥೆಯ ಪ್ರವೀಣ್‌ಹತ್ತಿ, ಎಸ್‌ಕೆಪಿ ಡಾನ್‌ ಸೆಂಟರ್‌ ನ ಜೆ.ಕೃಷ್ಣನ್‌ ಅವರಿಗೆಅಭಿನಂದನೆ ಸಲ್ಲಿಸಿದರು.

ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದಗಿರಿಜಾ ಧನಿಯಕುಮಾರ್‌, ಭಾರತ್‌ ಸ್ಕೌಟ್ಸ್‌ ಮತ್ತುಗೈಡ್ಸ್‌ ಈಶ್ವರಯ್ಯ, ಆಂಜನಪ್ಪ, ಸ್ಥಳೀಯ ಸಂಸ್ಥೆಯಎಡಿಸಿಗಳಾದ ರಮೇಶ್‌ ಬಾಬು, ಶಿವಕುಮಾರ್‌,ಬಿ.ಎಸ್‌.ದಯಾನಂದ, ಮಹೇಶ್‌ ಕುಮಾರ್‌ ಗುಡಿ,ಸಿದ್ದಪ್ಪ, ಸುದೇಶ್‌ ಕುಮಾರ್‌, ರಮೇಶ್‌, ಟಿ.ಎಸ್‌.ರಮೇಶ್‌, ಸುದೇಶ್‌ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next