Advertisement

ಒಕ್ಕೂಟದ ಯೋಜನೆಗಳ ಫ‌ಲ ಸದಸ್ಯರಿಗೆ ತಲುಪಿಸಿ

06:01 PM Dec 20, 2020 | Suhan S |

ಕನಕಪುರ: ಬಮೂಲ್‌ ವತಿಯಿಂದ ರೈತರಿಗಾಗಿ ನೀಡುತ್ತಿರುವ ಯೋಜನೆಗಳನ್ನು ಸಂಘದ ಅಧ್ಯಕ್ಷರು ಸಮರ್ಪಕವಾಗಿ ಸದಸ್ಯರಿಗೆ ಸಿಗುವಂತೆ ಮಾಡಬೇಕು ಎಂದು ಒಕ್ಕೂಟದ ನಿರ್ದೇಶಕ ಹರೀಶ್‌ ಕುಮಾರ್‌ ಸಲಹೆ ನೀಡಿದರು.

Advertisement

ತಾಲೂಕಿನ ಹಾರೋಹಳ್ಳಿಯ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿನಡೆದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ 2019-20ನೇ ಸಾಲಿನ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ದಂತಹ ಸಂದರ್ಭದಲ್ಲೂ ಬಮೂಲ್‌ ರೈತರನ್ನು ಕೈಬಿಡದೆ ಕಾರ್ಯನಿರ್ವಹಿಸಿಕೊಂಡು ಬಂದಿದೆ. ದೇಶಾದ್ಯಂತ ಒಕ್ಕೂಟ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಕಡೆಗಳಲ್ಲೂ ನಮ್ಮ ಹಾಲಿಗೆ ಉತ್ತಮವಾದ ಬೇಡಿಕೆ ಇದೆ. ರೈತರು ಗುಣಮಟ್ಟದ ಹಾಲು ಪೊರೈಕೆ ಮಾಡಿದರೆಒಕ್ಕೂಟದ ಜತೆಗೆ ಸಂಘವೂ ಅಭಿವೃದ್ಧಿಯಾಗಿ ನೀವೂ ಉತ್ತಮ ಆದಾಯ ಗಳಿಸಬಹುದು ಎಂದು ವಿವರಿಸಿದರು.

ಗ್ರಾಮೀಣ ಭಾಗದ ಉದ್ಯೋಗ ರಹಿತ ಸಮೂಹವನ್ನು ಹೈನೋದ್ಯಮದತ್ತ ಸೆಳೆಯಲು ಒಕ್ಕೂಟಇನಷ್ಟುಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಿದೆ.  ಮುಂದಿನ ದಿನಗಳಲ್ಲಿ ಹೈನುಗಾರಿಕೆ ಲಾಭದಾಯಕ ವಾಗಲಿದೆ. ಸಂಘದ ಅಧ್ಯಕ್ಷರು ಒಕ್ಕೂಟದ ಯೋಜನೆಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು. ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಮುಖ್ಯಕಾರ್ಯನಿರ್ವಹಕರನ್ನು,ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ಸಂಘಗಳು, ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗಳನ್ನು, ಅತಿ ಹೆಚ್ಚು ಹಾಲು ಪೂರೈಸಿದ ಸದಸ್ಯರನ್ನು ಸನ್ಮಾನಿಸಲಾಯಿತು ಮತ್ತು ದೊಡ್ಡ ಸಾಧೇನಹಳ್ಳಿಯಮೃತಪಟ್ಟ ಹಾಲು ಉತ್ಪಾದಕ ಕುಟುಂಬಕ್ಕೆ ವಿಮೆ ಹಣ ವಿತರಿಸಲಾಯಿತು. ನೋಡಲ್‌ ಅಧಿಕಾರಿ ಪ್ರಸನ್ನ ಕುಮಾರ್‌, ಉಪವ್ಯವಸ್ಥಾಪಕ ಪ್ರಕಾಶ್‌, ವಿಸ್ತರಣಾಧಿ ಕಾರಿಗಳಾದ ಪ್ರವೀಣ್‌ ಕುಮಾರ್‌, ಅಲ್ಲಾ ಸಾಬ್‌, ಗೋವಿಂದ, ಮಾರೇಗೌಡ,ಅನಿತಾಉಪಸ್ಥಿತರಿದ್ದರು.

 ಮನೆ ಆವರಣ, ಹೊಲ ಸ್ವಚ್ಛತೆ ಬಗ್ಗೆ ಅರಿವು :

ಮಾಗಡಿ: ಸ್ವಚ್ಛ ಭಾರತದ ಅಭಿಯಾನದಡಿಯಲ್ಲಿ ಡಿಸೆಂಬರ್‌ ಪಾಕ್ಷಿಕೆ ಪ್ರಯುಕ್ತ ಮನೆ ಆವರಣ, ಹೊಲಗಳ ಸ್ವತ್ಛತೆ ಕುರಿತು ಕೃಷಿ ವಿಜ್ಞಾನ ಕೇಂದ್ರದಿಂದ ಜನ ಜಾಗೃತಿ ಮೂಡಿಸಲಾಯಿತು.

Advertisement

ತಾಲೂಕಿನ ಚಂದೂರಾಯನಹಳ್ಳಿಕೃಷಿ ವಿಜ್ಞಾನಕೇಂದ್ರದಿಂದ 31ನೇ ಡಿಸೆಂಬರ್‌ವರೆಗೆ ಸ್ವಚ್ಛತಾ ಪಾಕ್ಷಿಕಾ ಅಭಿಯಾನ ಹಮ್ಮಿಕೊಂಡಿದ್ದು, ಶುಕ್ರವಾರಕಾಳಾರಿ ಗ್ರಾಮದಲ್ಲಿ ಮನೆ ಆವರಣ, ಹೊಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ವೈಯಕ್ತಿಕ ಮತ್ತು ಮನೆಯ ಪರಿಸರ ಸ್ವತ್ಛವಾಗಿಟ್ಟುಕೊಳ್ಳುವ ಬಗ್ಗೆ ಅರಿವು ಮೂಡಿಸಲಾಯಿತು. ಏಕ ಬಳಕೆ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಲಾಯಿತು. ಗ್ರಾಮ ಮಟ್ಟದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಜಾಗೃತಿಗೊಳಿಸಲಾಯಿತು. ಜೊತೆಗೆ‌ ಸುತ್ತಮುತ್ತಲಿನ ಕಸ  ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯ ಸ್ವಚ್ಛಗೊಳಿಸಲಾಯಿತು.ಈ ವೇಳೆ ಕೃಷಿ ಆಧಾರಿತ ಆ್ಯಪ್‌ಗ್ಳ ಬಗ್ಗೆ ಮಾಹಿತಿ ನೀಡಲಾಯಿತು. ಕೇಂದ್ರದ ವಿಜ್ಞಾನಿ ಲತಾ ಆರ್‌.ಕುಲಕರ್ಣಿ, ಚೈತ್ರಶ್ರೀ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next