Advertisement

ಕೇಂದ್ರ ಸರ್ಕಾರದ ಸಾಧನೆ ಮನೆ ಮನೆಗಳಿಗೆ ತಲುಪಿಸಿ

05:33 PM Jul 04, 2022 | Shwetha M |

ಚಡಚಣ: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 8 ವರ್ಷ ಆಡಳಿತ ಪೂರೈಸಿದ ನಿಮಿತ್ತ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ವಿಕಾಸ ತೀರ್ಥ ಬೈಕ್‌ ರ್ಯಾಲಿ ನಡೆಸಿದರು.

Advertisement

ದೇವರನಿಂಬರಗಿ ಕ್ರಾಸ್‌ನಿಂದ ಎಸ್‌ಬಿಐ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ರ್ಯಾಲಿ ನಡೆಯಿತು. ರ್ಯಾಲಿ ಉದ್ದೇಶಿಸಿ ಮುಖಂಡ ಉಮೇಶ ಕಾರಜೋಳ ಮಾತನಾಡಿ, 60 ವರ್ಷದಲ್ಲಿ ಬಗೆಹರಿಯದ ಜಟಿಲ ಸಮಸ್ಯೆಗಳನ್ನು 8 ವರ್ಷದಲ್ಲಿ ಮೋದಿಜಿಯವರು ಬಗೆಹರಿಸಿದ್ದಾರೆ. ಸತತ 8 ವರ್ಷಗಳ ಕಾಲ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ನೋಟ್‌ ಬ್ಯಾನ್‌, ಉಜ್ವಲ ಯೋಜನೆ, ಸ್ವಚ್ಛ ಭಾರತ ಯೋಜನೆ, ಗರೀಬ ಕಲ್ಯಾಣ, ಒಂದು ದೇಶ ಒಂದು ತೆರಿಗೆ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರ ಮನೆ ಮನೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ರ್ಯಾಲಿಯಲ್ಲಿ ತಾಪಂ ಸದಸ್ಯ ರಾಜುಗೌಡ ಝಳಕಿ, ಚಡಚಣ ಮಂಡಲ ಅಧ್ಯಕ್ಷ ರಾಮ ಅವಟಿ, ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸಚಿನ ಅವಟಿ, ಶ್ರವಣ ವಾಲೀಕಾರ, ಉಪಾಧ್ಯಕ್ಷರುಗಳಾದ ವಿಲಾಸ ಡೊಳ್ಳಿ, ಸಂಜು ಏಳಗಿ, ಅಮನ್‌ ಕುಲಕರ್ಣಿ, ಸಂಜು ಕಂಬಾರ, ಶ್ರೀಕಾಂತ ಗಂಟಗಲ್ಲ, ವಿಜಯಕುಮಾರ ಅವಟಿ, ಶಿವಾನಂದ ಖಟ್ಟಿ, ಸಚಿನ ಭಮಶೆಟ್ಟಿ, ಸಂತೋಷ ಒಣಕುದರಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next