Advertisement

ವಿಕಲಚೇತನರಿಗೆ ಪ್ರಾಮಾಣಿಕವಾಗಿ ಸೌಲಭ್ಯ ತಲುಪಿಸಿ

02:37 PM Sep 22, 2020 | Suhan S |

ಮಂಡ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ವಿಕಲಚೇತನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಮೂಲಕ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಉಪನಿಯಮ (72)ರಡಿಜಿಲ್ಲಾ ಮಟ್ಟದ ಸಮಿತಿ ರಚಿಸುವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯು ವಿಕಲಚೇತನ ಮಕ್ಕಳಿಗೆ ಅವರಮನೆಗಳಿಗೆ ತೆರಳಿ ಬೋಧಿಸಿ, ಅವರ ಕಲಿಕಸಾಮರ್ಥ್ಯವನ್ನು ಹೆಚ್ಚಿಸಬೇಕು. ಎನ್‌ಜಿಒಗಳಲ್ಲಿ ಅವರಿಗೆ ಅವಶ್ಯಕತೆ ಇರುವ ಪುಸ್ತಕಗಳ ಮಾಹಿತಿ ಪಡೆದು ಅಂಥ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಬೇಕು ಎಂದು ತಿಳಿಸಿದರು.

ಜಾಗೃತಿ ಮೂಡಿಸಿ: 1995ರ ಅಂಗವಿಕಲತೆ ಕಾಯ್ದೆ ಪ್ರಕಾರ ದೈಹಿಕ ಅಂಗವಿಕಲತೆ, ಅಂಧತ್ವ, ವಾಕ್‌ ಮತ್ತು ಶ್ರವಣ ದೋಷ, ಬುದ್ಧಿಮಾಂಧ್ಯತೆ, ಬಹುವಿಧ ಅಂಗವಿಕಲತೆ, ಕುಷ್ಠ ರೋಗ ನಿವಾರಿತ ಅಂಗವಿಕಲತೆ ಮತ್ತು 2016ರ ವಿಕಲಚೇತನರ ಕಾಯ್ದೆ ಪ್ರಕಾರ ದೃಷ್ಟಿದೋಷ, ಮಂದ ದೃಷ್ಟಿ, ಕುಷ್ಠರೋಗದಿಂದ ಗುಣವಾಗಿರುವವರು, ದೈಹಿಕ ಅಂಗವಿಕಲತೆ, ಬೌದ್ಧಿಕ ವಿಕಲತೆ, ಮಾನಸಿಕ ಅಸ್ವಸ್ಥತೆ, ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್, ಮೆದುಳುವಾತ, ಮಸ್ಕ್ಯುಲರ್‌ ಡಿಸ್‌ ಟ್ರೋಪಿ,ಕ್ರೋನಿಕ್‌ನ್ಯೂರೂಲೊಜಿಕಲ್‌ಕಂಡೀಷನ್‌, ನಿರ್ದಿಷ್ಟಕಲಿಕಾ ನ್ಯೂನ್ಯತೆ,ಮಲ್ಟಿಪಲ್‌ ಸ್ಕಿರೋಸಿಸ್‌, ಮಾತು ಮತ್ತು ಭಾಷೆಯ ವಿಕಲತೆ, ತ್ಯಾಲೆಸೀಮಿಯ, ಹೀಮೊಫಿಲಿಯ, ಸ್ಲಕ್‌ ಸೆಲ್‌ ಎನೀಮಿಯ, ಬಹುವಿಧ ಅಂಗವಿಕಲತೆ, ಆಸಿಡ್‌ ದಾಳಿಗೆ ತುತ್ತಾದವರು ಮತ್ತು ಪಾರ್ಕಿನ್ಸನ್‌ ಕಾಯಿಲೆಗಳಿಗೆ ತುತ್ತಾದವರಿಗೆ ಜಾಗೃತಿ ಮೂಡಿಸಬೇಕು ಎಂದರು.

ಎಲ್ಲ ಸೌಲಭ್ಯ ನೀಡಿ: ವಿಕಲಚೇತನರಕಚೇರಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ಸ್ಥಳ ಪರಿಶೀಲಿಸಬೇಕು. ಜಿಲ್ಲೆಯ ಎಲ್ಲ ತಾಲೂಕಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ, ಅಸ್ಪತ್ರೆಗಳಲ್ಲಿ, ಗ್ರಾಮ ಪಂಚಾಯತಿ ಮತ್ತು ನಗರಸಭೆಗಳಲ್ಲಿ ಶೌಚಾಲಯದ ವ್ಯವಸ್ಥೆ ಮಾಡಿ ಹಾಗೂ ಆಧಾರ್‌ ಕಾರ್ಡ್‌ ಇಲ್ಲದೆ ಸಮಸ್ಯೆಇರುವ ವಿಕಲಚೇತನರಿಗೆ ಅವರ ತಂದೆ-ತಾಯಿ ಅಥವಾ ಅವರು ಇರುವ ಸಂಸ್ಥೆಯ ಅಧಿಕಾರಿಗಳ ಹೆಬ್ಬೆರಳಿನ ಮುದ್ರೆಯನ್ನು ಸ್ವೀಕರಿಸಿ, ಆಧಾರ್‌ ಪಡೆದು ಸಿಗುವ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಆರ್‌.ರೋಹಿತ್‌, ಜಿಲ್ಲಾಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜುಮೂರ್ತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿರಿದ್ದರು.

Advertisement

ನರೇಗಾದಲ್ಲಿ ಉದ್ಯೋಗವ್ಯವಸ್ಥೆ ಮಾಡಿ: ಡೀಸಿ :  ವಿಕಲಚೇತನರ ಆರ್ಥಿಕ, ಸಬಲೀಕರಣವಾಗಿ ಮಾಡಲು ನರೇಗಾದಲ್ಲಿ ಉದ್ಯೋಗದ ವ್ಯವಸ್ಥೆ ಮಾಡಿ ಆರ್ಥಿಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಅವರ ಸಾಮರ್ಥ್ಯವನ್ನು ಹೆಚ್ಚಿಸಬೇಕು.ಕೆಎಸ್‌ಆರ್‌ಟಿಸಿ, ಪೊಲೀಸ್‌ ಇಲಾಖೆ, ಲೋಕೋಪಯೋಗಿ ಮತ್ತು ಬಂದರು ಇಲಾಖೆ, ಶಿಕ್ಷಣ ಇಲಾಖೆ ಮತ್ತು ಆಸ್ಪತ್ರೆಗಳಲ್ಲಿನ ಸಿಬ್ಬಂದಿಗಳಿಗೆ ವಿಕಲಚೇತನರ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅಧಿಕಾರಿಗಳಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next