Advertisement
“ಈ ವಯಸ್ಸಿನಲ್ಲಿ ಹೊಸ ಭಾಷೆಯನ್ನೂ ಏಕೆ ಕಲಿಯುತ್ತೀರಿ?’- ರಾಮತೀರ್ಥರು ಕೇಳಿದರು. “ನಾನು ಭೂಗರ್ಭ ಶಾಸ್ತ್ರದ ಪೊ›ಫೆಸರ್. ರಷಿಯನ್ ಭಾಷೆಯಲ್ಲಿ ಈ ಶಾಸ್ತ್ರದ ಅತ್ಯುತ್ತಮ ಗ್ರಂಥವೊಂದು ಹೊರಬಿದ್ದಿದೆ. ಅದನ್ನು ಅನುವಾದಿ ಸಿದರೆ, ಅದರಿಂದ ನಮ್ಮ ದೇಶದ ಜನರಿಗೆ ತುಂಬಾ ಪ್ರಯೋಜನವಾದೀತು. ಅದಕ್ಕಾಗಿಯೇ ರಷಿಯನ್ ಭಾಷೆ ಕಲಿಯುತ್ತಿದ್ದೇನೆ’-ಎಂಬ ಉತ್ತರ ಬಂತು. “ನೀವು ಈಗ ಸಾವಿನ ದಂಡೆಯಲ್ಲಿ ನಿಂತಿದ್ದೀರಿ ಅನ್ನಬಹುದು. ಅಷ್ಟುವಯಸ್ಸಾಗಿದೆ ನಿಮಗೆ. ಈಗ ಹೊಸ ಭಾಷೆ ಕಲಿತು ಏನು ಫಲ? ಅದರ ಬದಲು ಪರಮಾತ್ಮನನ್ನು ಧ್ಯಾನಿಸಿರಿ. ಬರೀ ಶಾಸ್ತ್ರಾಭ್ಯಾಸದಿಂದ ಏನು ಪ್ರಯೋಜನ?’- ರಾಮತೀರ್ಥರು ಹೀಗೊಂದು ಸಲಹೆ ಕೊಟ್ಟರು. ಅದಕ್ಕೆ ಅಮೆರಿಕದ ಆ ವೃದ್ಧ ಪ್ರೊಫೆಸರ್ ಕೊಟ್ಟ ಉತ್ತರ ಹೀಗಿತ್ತು- “ಜನತೆಯ ಸೇವೆಯೇ ದೇವರ ಸೇವೆ. ನನ್ನ ಬಂಧುಗಳಿಗೆ ಅನುಕೂಲ ಆಗುವಂತಿದ್ದರೆ, ಅದಕ್ಕಾಗಿ ಎಂಥಾ ರಿಸ್ಕ್ ತಗೊಳ್ಳಲೂ ನಾನು ಸಿದ್ಧ. ಸಾವಿನ ಭಯದಿಂದ ನಾನು ಪರರ ಸೇವೆ ಮಾಡುವ ಹಕ್ಕನ್ನು ಬಿಟ್ಟು ಕೊಡಲಾರೆ… ‘