ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು- 1/2 ಕಪ್, ಕಡಲೆ (ಬೇಸನ್) ಹಿಟ್ಟು- 1/2 ಕಪ್, ಸಕ್ಕರೆ ಹುಡಿ-1 ಕಪ್, ಬೊಂಬಾಯಿ ರವೆ-2 ಚಮಚ, ತುಪ್ಪ-1/2 ಕಪ್, ಏಲಕ್ಕಿ ಹುಡಿ- 1 ಚಮಚ, ದ್ರಾಕ್ಷೆ- 10.
Advertisement
ತಯಾರಿಸುವ ವಿಧಾನ: ದಪ್ಪ ತಳದ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ದ್ರಾಕ್ಷಿ ಹಾಕಿ ಅರಳಿಸಿಕೊಂಡು ತೆಗೆದಿಡಿ. ಉಳಿದ ತುಪ್ಪ ಹಾಕಿ, ಗೋಧಿಹಿಟ್ಟು, ಕಡಲೆಹಿಟ್ಟು , ರವೆ ಹಾಕಿ ಪರಿಮಳ ಬರುವವರೆಗೆ ಹುರಿದು ಅದಕ್ಕೆ ಸಕ್ಕರೆ ಹುಡಿ, ಏಲಕ್ಕಿ, ದ್ರಾಕ್ಷಿ ಹಾಕಿ ಮಗುಚಿ. ಅಂಗೈಗೆ ತುಪ್ಪ ಸವರಿ ಉಂಡೆ ಕಟ್ಟಿಡಿ. ಘಮ ಘಮ ಬೇಸನ್ ಲಾಡು ಸವಿಯಿರಿ.
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- ಒಂದೂವರೆ ಕಪ್, ಉದ್ದಿನಬೇಳೆ ಹಿಟ್ಟು- 1/2 ಕಪ್, ಚಿರೋಟಿ ರವೆ- 4 ಚಮಚ, ಜೀರಿಗೆ- 1 ಚಮಚ, ಬೆಣ್ಣೆ ನಿಂಬೆಗಾತ್ರ, ಉಪ್ಪು- 2 ಚಮಚ, ಕರಿಯಲು ಎಣ್ಣೆ. ತಯಾರಿಸುವ ವಿಧಾನ: ಅಕ್ಕಿ ತೊಳೆದು ಬಟ್ಟೆಯ ಮೇಲೆ ಹರಡಿ ಒಣಗಿಸಿ. ನುಣ್ಣಗೆ ಬೀಸಿ ಹಿಟ್ಟು ತಯಾರಿಸಿ ಜರಡಿ ಹಿಡಿದುಕೊಳ್ಳಿ. ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಉಪ್ಪು ಕರಗಿಸಿ ಜೀರಿಗೆ, ಅಕ್ಕಿಹಿಟ್ಟು, ಬೆಣ್ಣೆ ಹಾಕಿ ಚೆನ್ನಾಗಿ ನಾದಿ ವಡೆ ಹಿಟ್ಟು ತಯಾರಿಸಿ. ಬಾಳೆಎಲೆಗೆ ಎಣ್ಣೆ ಸವರಿ ವಡೆ ಹಿಟ್ಟಿನ ಚಿಕ್ಕ ಉಂಡೆ ಇಟ್ಟು ಅಂಗೈಯಿಂದ ವಡೆ ತಟ್ಟಿ. ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ಹತ್ತಾರು ವಡೆ ಕರಿದು ಟಿಶ್ಯೂ ಕಾಗದದ ಮೇಲೆ ಹಾಕಿ. ತಣಿದ ನಂತರ ಡಬ್ಬಿಯಲ್ಲಿ ಹಾಕಿ.
Related Articles
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- 2 ಕಪ್, ಬೆಲ್ಲದ ಹುಡಿ- 2 ಕಪ್, ಏಲಕ್ಕಿ ಹುಡಿ- 1 ಚಮಚ, ತೆಂಗಿನಕಾಯಿ ತುರಿ- 1 ಕಪ್, ಕಾಳುಮೆಣಸಿನ ಹುಡಿ- 1 ಚಮಚ, ಬಿಳಿ ಎಳ್ಳು- 4 ಚಮಚ, ಗಸಗಸೆ- 2 ಚಮಚ, ಕರಿಯಲು ಎಣ್ಣೆ.
Advertisement
ತಯಾರಿಸುವ ವಿಧಾನ: ಅಕ್ಕಿ ತೊಳೆದು ಒಣಗಿಸಿ ನುಣ್ಣಗೆ ಹಿಟ್ಟು ಮಾಡಿ ಜರಡಿ ಹಿಡಿದುಕೊಳ್ಳಿ. ಎಳ್ಳನ್ನು ತೊಳೆದು ಹುರಿದಿಡಿ. ತೆಂಗಿನ ತುರಿ ರುಬ್ಬಿ. ಬಾಣಲೆಗೆ ಬೆಲ್ಲ ತೆಂಗಿನ ತುರಿ ಹಾಕಿ ಸ್ವಲ್ಪ ನೀರು ಹಾಕಿ ಕಲಸಿ. ಅಕ್ಕಿಹುಡಿ, ಏಲಕ್ಕಿ, ಎಳ್ಳು, ಗಸೆಗಸೆ, ಕಾಳುಮೆಣಸಿನ ಹುಡಿ ಹಾಕಿ ಚೆನ್ನಾಗಿ ಮಗುಚಿ ಮುದ್ದೆಯಾದ ಕೂಡಲೆ ಕೆಳಗಿಳಿಸಿ. ಸ್ವಲ್ಪ ತೆಂಗಿನೆಣ್ಣೆ ಹಾಕಿ ತಣಿದ ನಂತರ ಲಿಂಬೆಗಾತ್ರದ ಉಂಡೆ ಮಾಡಿ ಬಾಳೆಎಲೆಗೆ ಎಣ್ಣೆ ಸವರಿ ಅವರ ಮೇಲೆ ಪೂರಿ ಗಾತ್ರಕ್ಕೆ ತಟ್ಟಿ. ಬಾಣಲೆಯಲ್ಲಿ ಎಣ್ಣೆ ಕುದಿದ ನಂತರ ಒಂದೆರಡು ಅತ್ರಸ ಬಿಟ್ಟು ಉಬ್ಬಿದ ತಕ್ಷಣ ಕವುಚಿ ಹಾಕಿ ಎರಡೂ ಬದಿ ಸೌಟಿನಿಂದ ಹಿಂಡಿ ತೆಗೆದು ಬಾಳೆಎಲೆ ಇಲ್ಲವೆ ಟಿಶ್ಯೂ ಪೇಪರ್ ಮೇಲೆ ಹಾಕಿ. ತಣಿದ ಮೇಲೆ ಡಬ್ಬಿಯಲ್ಲಿ ಹಾಕಿಡಿ. ಒಂದು ವಾರವಾದರೂ ಹಾಳಾಗುವುದಿಲ್ಲ.
ಮಸಾಲೆ ನಿಪ್ಪಟ್ ಬೇಕಾಗುವ ಸಾಮಗ್ರಿ: ಅಕ್ಕಿಹಿಟ್ಟು- ಒಂದೂವರೆ ಕಪ್, ಉದ್ದಿನಬೇಳೆ- 1/2 ಕಪ್, ಬೆಣ್ಣೆ- ಲಿಂಬೆಗಾತ್ರ, ತೆಂಗಿನಹಾಲು- 1 ಕಪ್, ಉಪ್ಪು ರುಚಿಗೆ, ಬೇವಿನಸೋಪ್ಪು ಸ್ವಲ್ಪ , ರವೆ- 2 ಚಮಚ, ಪುಟಾಣಿ ಕಡಲೆ- 1/4 ಕಪ್, ಶೇಂಗಾ ಬೀಜ- 4 ಕಪ್, ಕರಿಯಲು ಎಣ್ಣೆ. ತಯಾರಿಸುವ ವಿಧಾನ: ಉದ್ದಿನಬೇಳೆ ಹುರಿದು ನಯವಾದ ಹಿಟ್ಟು ಮಾಡಿ. ಶೇಂಗಾ ಸಿಪ್ಪೆ ಸುಲಿದು ಸ್ವಲ್ಪ ಜಜ್ಜಿಡಿ. ಪಾತ್ರೆಯಲ್ಲಿ ರವೆ, ಉಪ್ಪು, ಪುಟಾಣಿ, ಶೇಂಗಾ, ತೆಂಗಿನಹಾಲು ಹಾಕಿ ಹತ್ತು ನಿಮಿಷದ ನಂತರ ಅಕ್ಕಿಹಿಟ್ಟು, ಉದ್ದಿನಹಿಟ್ಟು, ಬೆಣ್ಣೆ, ಕರಿಬೇವು ಸೊಪ್ಪು ಹಾಕಿ ಚೆನ್ನಾಗಿ ನಾದಿಡಿ. ಬಾಳೆಎಲೆಗೆ ಎಣ್ಣೆ ಸವರಿ ತಯಾರಿಸಿಟ್ಟ ಹಿಟ್ಟಿನ ಚಿಕ್ಕ ಚಿಕ್ಕ ಉಂಡೆ ಇಟ್ಟು ಚಪ್ಪಟೆ ಪೂರಿಯಾಕಾರದಲ್ಲಿ ಒತ್ತಿಡಿ. ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ಐದಾರು ನಿಪ್ಪಟ್ಟು ಹಾಕಿ ಎರಡೂ ಬದಿ ಕರಿದು ತೆಗೆಯಿರಿ. ಕುರು ಕುರು ಗರಿ ಗರಿ ನಿಪ್ಪಟ್ ಸವಿಯಲು ಸಿದ್ಧ. (ಖಾರ ಬೇಕಾದರೆ ಒಣಮೆಣಸಿನ ಹುಡಿ ಇಲ್ಲವೆ ಹಸಿ ಮೆಣಸಿನಕಾಯಿ ಚೂರು ಹಾಕಿ). ಎಸ್. ಜಯಶ್ರೀ ಶೆಣೈ