Advertisement
ಜಿಲ್ಲಾ ಕಸಾಪ ನಗರದಲ್ಲಿ ಆಯೋಜಿಸಿದ್ದ ಪ್ರೊ| ವೀರೇಂದ್ರ ಸಿಂಪಿ ಅವರ ಮೊದಲನೇ ಸ್ಮರಣೋತ್ಸವ, ಪುಸ್ತಕ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ| ಬಸವರಾಜ ಬಲ್ಲೂರ ಸಂಪಾದಿತ ಪ್ರೊ| ವೀರೇಂದ್ರ ಸಿಂಪಿಯವರ ಸಮಗ್ರ ಲಲಿತ ಪ್ರಬಂಧಗಳ ಸಂಕಲನ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸಿಂಪಿಯವರಿಗೆ ಅದಮ್ಯ ಜೀವನೋತ್ಸವ, ಜೀವನ ಪ್ರೀತಿಯಿತ್ತು. ಅದನ್ನೆ ತಮ್ಮ ಪ್ರಬಂಧಗಳಲ್ಲಿ ತಂದರು. ಅವರ ಸಾಹಿತ್ಯದಲ್ಲಿ ವಿಡಂಬನೆ, ವ್ಯಂಗ್ಯ, ಜೊತೆಗೆ ಸಮಾಜ ತಿದ್ದುವ ಹೊಸ ಆಲೋಚನೆ ಹಾಸು ಹೊಕ್ಕಾಗಿರುವುದು ಕಾಣಬಹುದಾಗಿದೆ. ಇಂಗ್ಲಿಷ್‌ನ ಆಳವಾದ ಜ್ಞಾನದೊಂದಿಗೆ ಕನ್ನಡಕ್ಕೆ ಅಗಾಧವಾದ ಕೊಡುಗೆ ಅವರ ಸಾಹಿತ್ಯದಿಂದಲಭಿಸಿದೆ. ಅನೇಕ ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಿಗೆ ಸಿಂಪಿರವರ ಬರಹಗಳು ಪಠ್ಯಗಳಾಗಿವೆ ಎಂದರು.
ಸಿಂಪಿರವರು ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ತನ್ನ ಮನೆಯಲ್ಲಿ ಕೆಲಸ ಮಾಡುವವಳ ಪರಿಸ್ಥಿತಿ, ಹೆಂಡತಿಯ ಮನೋಭಾವನೆ, ಹಳ್ಳಿ ಚಹಾ ಹೋಟೆಲಿನ ಚಿತ್ರಣ ನಮ್ಮ ಸಾಹಿತ್ಯದಲ್ಲಿ ಸೆರೆಹಿಡಿದಿದ್ದಾರೆ. ಹಳ್ಳಿ ಚಹಾ ಹೋಟೆಲ್‌ಗಳು ಆಧುನಿಕ ವಾರ್ತಾ ಇಲಾಖೆ ಎಂಬಂತೆ ಚಿತ್ರಿಸಿದ್ದಾರೆ. ಪ್ರೀತಿ ಬಗ್ಗೆ ತುಂಬಾ ಚೆನ್ನಾಗಿ ವಿಷಯ ಪ್ರಸ್ತಾಪಿಸಿದ್ದಾರೆ. ನಮಗೆ ಪ್ರಕೃತಿ ವಿಕೋಪ ಆದಾಗ, ಆರೋಗ್ಯ ಕೆಟ್ಟಾಗ, ಸಂಬಂಧದಲ್ಲಿ ಬಿರುಕುಂಟಾದಾಗ ಆಗುವ ದುಃಖವನ್ನು ಎಳೆಯಾಗಿ ಬಿಡಿಸಿಟ್ಟಿದ್ದಾರೆ ಎಂದು ಹೇಳಿದರು.
ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಮಾತನಾಡಿ, ಪ್ರೊ| ಸಿಂಪಿಯರು ಬೀದರಿಗೆ ಬಂದ ಮೇಲೆಯೇ ಸಾಹಿತ್ಯದಲ್ಲಿ ಒಂದು ಸಂಚಲನ ಆರಂಭವಾಗಿದೆ. ಶೈಕಣಿಕವಾಗಿ ಸಾಸನೂರು, ಸಾಮಾಜಿಕವಾಗಿ ಡಾ| ಕೌಜಲಗಿ, ಸಾಹಿತ್ಯಕವಾಗಿ ಸಿಂಪಿಯವರ ಕೊಡುಗೆ ಅವೀಸ್ಮರಣೀಯವೆಂದು ಸ್ಮರಿಸಿದರು.
Related Articles
Advertisement
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ| ಬಸವರಾಜ ಬಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಶಿವಶಂಕರ್ ಟೋಕರೆ ನಿರೂಪಿಸಿ, ಯೋಗೇಶ್ ಮಠದ ವಂದಿಸಿದರು.