Advertisement

ದೆಹಲಿಯಲ್ಲಿ ಕೋವಿಡ್ 19 ಅಟ್ಟಹಾಸ: 40 ಸಾವಿರ ದಾಟಿದ ಪ್ರಕರಣ ; ಒಂದೇ ದಿನ 2 ಸಾವಿರ ಸೋಂಕಿತರು

11:51 PM Jun 14, 2020 | Hari Prasad |

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ 19 ಸೊಂಕಿನ ಪ್ರಕರಣಗಳು ಎಡೆಬಿಡದೆ ವರದಿಯಾಗುತ್ತಲೇ ಇದೆ.

Advertisement

ಇಂದು ಒಂದೇ ದಿನ ದೆಹಲಿಯಲ್ಲಿ 2,224 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಇಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 41,182ಕ್ಕೆ ಏರಿಕೆಯಾದಂತಾಗಿದೆ.

ರವಿವಾರ ಒಂದೇ ದಿನ 2,224 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿರುವುದು ಇದುವರೆಗಿನ ಹೆಚ್ಚಿನ ಸಂಖ್ಯೆಯಾಗಿದೆ.

ಮಾತ್ರವಲ್ಲದೇ ಒಂದೇ ದಿನದಲ್ಲಿ ಕೋವಿಡ್ 19 ಸೋಂಕಿನ ಕಾರಣ 56 ಜನ ಸಾವನ್ನಪ್ಪಿರುವುದು ರಾಷ್ಟ್ರರಾಜಧಾನಿಯಲ್ಲಿ ಸೋಂಕಿನ ತೀವ್ರತೆಯನ್ನು ಪ್ರತಿಬಿಂಬಿಸುತ್ತಿದೆ.

ಒಂದೇ ದಿನ 56 ಕೋವಿಡ್ 19 ಸೋಂಕಿತರು ಸಾವನ್ನಪ್ಪುವುದರೊಂದಿಗೆ ದೆಹಲಿಯಲ್ಲಿ ಕೋವಿಡ್ 19 ಪ್ರಕರಣದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,327ಕ್ಕೆ ಏರಿಕೆಯಾಗಿದೆ.

Advertisement

ದೆಹಲಿಯಲ್ಲಿ ಇನ್ನೂ 24,032 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next