Advertisement

ಯೂಟ್ಯೂಬ್ ಚಾನೆಲ್ ಗಾಗಿ ಹೈಡ್ರೋಜನ್ ಬಲೂನ್ ಕಟ್ಟಿ ನಾಯಿಯನ್ನು ಹಾರಿಸಿದ ವ್ಯಕ್ತಿ ಬಂಧನ!

11:02 AM May 27, 2021 | Team Udayavani |

ನವದೆಹಲಿ: ಇತ್ತೀಚೆಗೆ ದೆಹಲಿ ಮೂಲದ ಯೂಟ್ಯೂಬರ್ ತನ್ನ ಸಾಕು ನಾಯಿಗೆ ಹಲವಾರು ಹೈಡ್ರೋಜನ್ ಗ್ಯಾಸ್ ಬಲೂನ್ ಗಳನ್ನು ಕಟ್ಟಿ ಅದನ್ನು ಹಾರುವಂತೆ ಮಾಡಿದ್ದು, ಆ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದ ಯೂಟ್ಯೂಬರ್ ನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ದುಡ್ಡು ಕೊಟ್ಟಿಲ್ಲವೆಂದು ಪಾರ್ಶ್ವವಾಯು ಪೀಡಿತ ತಂದೆ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ ಮಗ

ಆರೋಪಿ ಗೌರವ್ ಜಾನ್, ತನ್ನ ಯೂಟ್ಯೂಬ್ ಚಾನೆಲ್ ಗಾಗಿ ದೆಹಲಿ ಪಾರ್ಕ್ ನಲ್ಲಿ ತನ್ನ ಸಾಕು ನಾಯಿಯನ್ನು ಹೈಡ್ರೋಜನ್ ಗ್ಯಾಸ್ ಬಲೂನ್ ಗಳಿಂದ ಕಟ್ಟಿ ಮೇಲಕ್ಕೆ ಹಾರಿಸುವ ವಿಡಿಯೋವನ್ನು ಮಾಡಿದ್ದ. ವಿಡಿಯೋದಲ್ಲಿ ನಾಯಿ ಕೆಲವು ಕ್ಷಣಗಳ ಕಾಲ ಗಾಳಿಯಲ್ಲಿ ತೇಲಾಡುತ್ತಿರುವ ದೃಶ್ಯವಿದ್ದು, ಗೌರವ್ ತಾಯಿ ಮೇಲಕ್ಕೆ ಹಾರಿಸಲು ಹುರಿದುಂಬಿಸುತ್ತಿರುವ ದೃಶ್ಯವಿದೆ. ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಿದ್ದು, ಪ್ರಾಣಿ ದಯಾ ಸಂಘಟನೆಗಳ ದೂರಿನ ನಂತರ ವಿಡಿಯೋವನ್ನು ತೆಗೆದು ಹಾಕಿರುವ ಘಟನೆ ನಡೆದಿದೆ ಎಂದು ವರದಿ ವಿವರಿಸಿದೆ.

ವಿಡಿಯೋದ ಬಗ್ಗೆ ಪಿಎಫ್ ಎ(ಪೀಪಲ್ ಫಾರ್ ಆ್ಯನಿಮಲ್) ಸಂಘಟನೆಯ ಸದಸ್ಯರು ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ನಂತರ ಪೊಲೀಸರು ಗೌರವ್ ನನ್ನು ಬಂಧಿಸಿದ್ದಾರೆ.

ಯೂಟ್ಯೂಬ್ ನಿಂದ ಒರಿಜಿನಲ್ ವಿಡಿಯೋವನ್ನು ಡಿಲೀಟ್ ಮಾಡಿದ್ದ ಗೌರವ್ ನಂತರ ಮತ್ತೊಂದು ವಿಡಿಯೋವನ್ನು ತನ್ನ ಚಾನೆಲ್ ನಲ್ಲಿ ಬಿಡುಗಡೆ ಮಾಡಿ, ಹಿಂದಿನ ವಿಡಿಯೋವನ್ನು ಡಿಲೀಟ್ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿ, ಯಾರಿಗಾದರೂ ಈ ಘಟನೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ತಿಳಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next