Advertisement
ಭಾರತೀಯ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಅಧ್ಯಕ್ಷ ರಣಿಂದರ್ ಸಿಂಗ್ ಇದನ್ನು ಸ್ಪಷ್ಟಪಡಿಸಿದ್ದಾರೆ. ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚೀನ ತಾನಾಗಿಯೇ ಹಿಂದಕ್ಕೆ ಸರಿದಿದೆ. ಈಗ ತೈವಾನ್, ಹಾಂಕಾಂಗ್, ಮಕಾವ್, ಉತ್ತರ ಕೊರಿಯಾ ಹಾಗೂ ತುರ್ಕ್ಮೆನಿಸ್ಥಾನ ರಾಷ್ಟ್ರಗಳು ಕೂಡ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿವೆ.
ಇದೇ ವೇಳೆ ಪಾಕಿಸ್ಥಾನ ಕೂಡ ಈ ಕೂಟದಿಂದ ಹಿಂದಕ್ಕೆ ಸರಿದಿದೆ. ಮುಂಬರುವ ಒಲಿಂಪಿಕ್ಸ್ ಅಭ್ಯಾಸಕ್ಕಾಗಿ ಅಲ್ಲಿನ ಸ್ಪರ್ಧಿಗಳು ಜರ್ಮನಿಗೆ ತೆರಳಿದ್ದಾರೆ. ಹೀಗಾಗಿ ಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಪಾಕಿಸ್ಥಾನ ಶೂಟಿಂಗ್ ಸಂಸ್ಥೆ ಹೇಳಿಕೊಂಡಿದೆ.
Related Articles
Advertisement
ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಮಾ. 15ರಿಂದ 25ರ ತನಕ “ಕರ್ಣಿ ಸಿಂಗ್ ಶೂಟಿಂಗ್ ರೇಂಜ್’ನಲ್ಲಿ ನಡೆಯಲಿದೆ.
ದೇಶದಲ್ಲೇ ತರಬೇತಿ ಪಡೆಯಿರಿ: ಎನ್ಆರ್ಎಐಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶದಲ್ಲೇ ಇದ್ದು ತರಬೇತಿ ಪಡೆಯುವಂತೆ ಭಾರತೀಯ ರಾಷ್ಟ್ರೀಯ ಶೂಟಿಂಗ್ ಸಂಸ್ಥೆ (ಎನ್‌ಆರ್‌ಎಐ) ಶೂಟರ್‌ಗಳಿಗೆ ಸೂಚಿಸಿದೆ. ವಿದೇಶಗಳಲ್ಲಿ ತರಬೇತಿ ಪಡೆಯುವುದನ್ನು ನಿಷೇಧಿಸಿದೆ. ಕೊರೊನಾ ವೈರಸ್ ಹತೋಟಿಗೆ ಬಾರದಿದ್ದರೆ ಒಲಿಂಪಿಕ್ಸ್ ಅರ್ಹತಾ ಕೂಟದಿಂದ ಹಿಂದಕ್ಕೆ ಸರಿಯುವುದಾಗಿಯೂ ತಿಳಿಸಿದೆ. ಎ. 16ರಿಂದ ಟೋಕಿಯೋದಲ್ಲಿ ಒಲಿಂಪಿಕ್ಸ್ ಅರ್ಹತಾ ಸುತ್ತು ಆರಂಭವಾಗಲಿದೆ.