Advertisement
ದಿನದ ಇನ್ನೊಂದು ರೋಚಕ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ 42-39 ಅಂತರದಿಂದ ಪುನೇರಿ ಪಲ್ಟಾನ್‌ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಬೆಂಗಳೂರು ಬುಲ್ಸ್ ಮೂರಕ್ಕೆ ಇಳಿಯಿತು. ಎರಡೂ ತಂಡಗಳು ತಲಾ 48 ಅಂಕ ಗಳಿಸಿವೆ.
ಆರಂಭದಿಂದಲೂ ಡೆಲ್ಲಿ ಪಡೆ ತಮಿಳ್ ಮೇಲೆ ಸವಾರಿ ಮಾಡುತ್ತಲೇ ಹೋಯಿತು. ಅದನ್ನು ಅಂತ್ಯದ ವರೆಗೂ ಕಾಯ್ದುಕೊಂಡು ಭರ್ಜರಿ ಜಯ ಸಾಧಿಸಿತು. ಡೆಲ್ಲಿ ತಂಡದ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಿದ್ದು ನವೀನ್ ಕುಮಾರ್ ಹಾಗೂ ಮೆರಾಜ್ ಶೇಖ್. ನವೀನ್ ಕುಮಾರ್ ಎದುರಾಳಿ ಕೋಟೆ ಮೇಲೆ 23 ಬಾರಿ ಎರಗಿ ಹೋಗಿ 17 ಅಂಕ ಗಳಿಸಿದರು. 13 ಅಂಕಗಳು ಟಚ್ ಮೂಲಕ ಬಂದರೆ, ಇನ್ನು 4 ಅಂಕಗಳು ಬೋನಸ್ ರೂಪದಲ್ಲಿ ಲಭಿಸಿದವು. ಇವರಿಗೆ ಪೂರ್ಣ ಬೆಂಬಲ ನೀಡಿದ್ದು ಮೆರಾಜ್ ಅವರು 15 ಬಾರಿ ಎದು ರಾಳಿ ಕೋಟೆಯೊಳಗೆ ನುಗ್ಗಿ 12 ಅಂಕ ಪಡೆಯಲು ಸಫಲರಾದರು. ಇವರಿಬ್ಬರ ಭರ್ಜರಿ ದಾಳಿಗೆ ತಮಿಳ್ ತತ್ತರಿಸಿತು.
Related Articles
Advertisement