Advertisement

ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿ ಮೇಲೆ  ಗ್ಯಾಂಗ್‌ ರೇಪ್‌

08:21 PM Feb 13, 2022 | Team Udayavani |

ಜೈಪುರ: ಕೆಲಸ ಕೊಡಿಸುವುದಾಗಿ ನಂಬಿಸಿ 25 ವರ್ಷದ ಯುವತಿಯನ್ನು ನಾಲ್ವರು ಆರೋಪಿಗಳು ಗ್ಯಾಂಗ್‌ ರೇಪ್‌ ಮಾಡಿ, ಕೊಲೆಗೆ ಯತ್ನಿಸಿರುವ ಘಟನೆ ರಾಜಸ್ಥಾನದ ಚುರು ನಗರದಲ್ಲಿ ನಡೆದಿದೆ.

Advertisement

ದೆಹಲಿ ಮೂಲದ ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಆರೋಪಿಗಳು ಆಕೆಯನ್ನು ಚುರುಗೆ ಕರೆಸಿಕೊಂಡಿದ್ದರು. ನಗರದ ಹೋಟೆಲ್‌ ಒಂದಕ್ಕೆ ಆಕೆಯನ್ನು ಕರೆದೊಯ್ದು, ಆಕೆಯನ್ನು ಗ್ಯಾಂಗ್‌ ರೇಪ್‌ ಮಾಡಿದ್ದಾರೆ.

ಇದನ್ನೂ ಓದಿ:ಶಿರಸಿ: ತಪ್ಪಾಗಿ ತಿಳಿದು ನಗರಸಭೆ ಸದಸ್ಯೆ ಮೇಲೆ ಹಲ್ಲೆ, ಜೀವ ಬೆದರಿಕೆ

ನಂತರ ಆಕೆಯ ಕೈ-ಕಾಲುಗಳನ್ನು ಕಟ್ಟಿಹಾಕಿ ಹೋಟೆಲ್‌ನ ಬಾಲ್ಕನಿಯಿಂದ ಹೊರಗೆ ಎಸೆದಿದ್ದಾರೆ. ಆಕೆಗೆ ಕಟ್ಟಿದ್ದ ಹಗ್ಗ ಹೋಟೆಲ್‌ನ ಕಂಬವೊಂದಕ್ಕೆ ಸಿಲುಕಿದ್ದರಿಂದಾಗಿ ಆಕೆ ಕೆಳಗೆ ಬೀಳದೆ, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸ್‌ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next