Advertisement

ತನ್ನ ಮನೆಗೆ ಕನ್ನ… ಬುರ್ಖಾ ಧರಿಸಿ ತಂಗಿಯ ಮದುವೆಗೆಂದು ಮಾಡಿಟ್ಟ ಆಭರಣಗಳನ್ನು ದೋಚಿದ ಅಕ್ಕ

10:31 AM Feb 05, 2024 | Team Udayavani |

ನವದೆಹಲಿ: ದೆಹಲಿಯಲ್ಲೊಂದು ವಿಚಿತ್ರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ, ಹೌದು ಮಹಿಳೆಯೊಬ್ಬಳು ತನ್ನ ಮನೆಗೆ ಕನ್ನ ಹಾಕಿ ತಂಗಿಯ ಮದುವೆಗೆಂದು ತೆಗೆದಿಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಇದೀಗ ಪೊಲೀಸ್ ಠಾಣೆಯಲ್ಲಿ ಕಂಬಿ ಎನಿಸುತ್ತಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Advertisement

ಏನಿದು ಪ್ರಕರಣ:
ದೆಹಲಿಯ ಉತ್ತಮ್ ನಗರದ ಮನೆಯೊಂದರಲ್ಲಿ ಕಳ್ಳತನವಾಗಿರುವ ಕುರಿತು ಮಹಿಳೆಯೊಬ್ಬರು ದೂರು ನೀಡಿದ್ದಾರೆ, ದೂರು ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ ಆದರೆ ಪೊಲೀಸರಿಗೆ ಕಳ್ಳರು ಮನೆಯೊಳಗೇ ಬಲವಂತವಾಗಿ ಪ್ರವೇಶಿಸಿದ ಯಾವುದೇ ಕುರುಹುಗಳು ಮೇಲ್ನೋಟಕ್ಕೆ ಸಿಗಲಿಲ್ಲ, ಅಲ್ಲದೆ ಮನೆಯಲ್ಲಿನ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗದೆ ಸರಿಯಾಗಿಯೇ ಇದ್ದವು ಇದರಿಂದ ಅನುಮಾನಗೊಂಡ ಪೊಲೀಸರು ಮನೆಯ ಸುತ್ತಮುತ್ತ ಇರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿರುವುದು ಕಂಡು ಬಂದಿದೆ.
ಈ ಕುರಿತು ಮಹಿಳೆಯ ಪತ್ತೆಗೆ ಬಲೆ ಬಿಸಿದಾಗ ಸಿಕ್ಕಿದ್ದು ಕಳ್ಳತನವಾದ ಮನೆಯ ಹಿರಿಯ ಮಗಳು ಶ್ವೇತಾ, ಈಕೆಯನ್ನು ವಿಚಾರಣೆ ನಡೆಸಿದಾಗ ನಿಜ ವಿಚಾರ ಬೆಳಕಿಗೆ ಬಂದಿದೆ.

ತಂಗಿಯ ಮೇಲಿನ ಅಸೂಯೆ:
ಪೊಲೀಸರು ಹಿರಿಯ ಸಹೋದರಿ ಶ್ವೇತಾ ಅವರನ್ನು ವಿಚಾರಣೆ ನಡೆಸಿದ ವೇಳೆ ತಾನೇ ಚಿನ್ನಾಭರಣಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾಳೆ ಅಲ್ಲದೆ ತನ್ನ ತಾಯಿ ತನಗಿಂತ ಜಾಸ್ತಿ ತನ್ನ ತಂಗಿಯನ್ನು ಪ್ರೀತಿಸುತ್ತಿದ್ದರು ಆಕೆಯ ಮೇಲಿನ ಅಸೂಯೆಯಿಂದ ಆಕೆಯ ಮದುವೆಗೆಂದು ತೆಗೆದಿಟ್ಟಿದ್ದ ಚಿನ್ನಾಭರಣಗಳನ್ನು ಕದಿಯುವ ನಿರ್ಧಾರಕ್ಕೆ ಬಂದೆ ಎಂದು ಶ್ವೇತಾ ಹೇಳಿಕೊಂಡಿದ್ದಾಳೆ.

ಘಟನೆ ಕಳೆದ ತಿಂಗಳು ೩೦ ರಂದು ನಡೆದಿದ್ದು ಇದಕ್ಕೂ ಮೊದಲು ಶ್ವೇತಾ ಕಳ್ಳತನಕ್ಕೆ ಪ್ಲಾನ್ ಮಾಡಿ ತನ್ನ ತಾಯಿಯ ಬಳಿ ಕಪಾಟಿನ ಹಾಗೂ ಮನೆಯ ಕೀಗಳನ್ನು ಪಡೆದುಕೊಂಡಿದ್ದರು ಆದರೆ ತಾಯಿಗೆ ತನ್ನ ಮಗಳು ಈ ಉದ್ದೇಶಕ್ಕಾಗಿ ಕೀ ಪಡೆದುಕೊಂದೊಂಡಿದ್ದಳು ಎಂದು ಗೊತ್ತಿರಲಿಲ್ಲ. ಕೊನೆಗೆ ಪೊಲೀಸರು ಮಹಿಳೆ ಬಳಿ ಇದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಕೊಂಡಿದ್ದು ಅದರಲ್ಲಿ ಕೆಲವೊಂದು ಆಭರಣಗಳನ್ನು ಮಹಿಳೆ ಮಾರಿದ್ದು ತನಗೆ ತುರ್ತು ಹಣದ ಅವಶ್ಯಕತೆ ಇತ್ತು ಹಾಗಾಗಿ ಅದನ್ನು ಮಾರಾಟ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

Advertisement

ಶೌಚಾಲಯದಲ್ಲಿ ಬುರ್ಖಾ ಧರಿಸಿದ ಮಹಿಳೆ:
ಕಳ್ಳತನಕ್ಕೆ ಯತ್ನ ನಡೆಸುವ ಮುನ್ನ ಯಾರಿಗೂ ತನ್ನ ಪರಿಚಯ ಸಿಗಬಾರದು ಎಂದು ಶ್ವೇತಾ ಇಲ್ಲಿನ ಸಾರ್ವಜನಿಕ ಶೌಚಾಲಯದಲ್ಲಿ ಬುರ್ಖಾ ಧರಿಸಿ ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕೀ ಬಳಸಿ ಕಳ್ಳತನ ನಡೆಸಿ ಪರಾರಿಯಾಗಿದ್ದಳು ಜೊತೆಗೆ ಕಳ್ಳತನದ ವಿಚಾರ ಮನೆಯವರಿಗೆ ಗೊತ್ತಾದ ಬಳಿಕ ತಾಯಿಯ ಜೊತೆ ಏನು ಗೊತ್ತಿಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಳು.

ಸದ್ಯ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಇನ್ನೂ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Chile: ಸಾವಿನ ಸಂಖ್ಯೆ 99ಕ್ಕೆ ಏರಿಕೆ, ನೂರಾರು ಮಂದಿ ನಾಪತ್ತೆ, ಸಾವಿರಾರು ಮನೆಗಳು ಭಸ್ಮ

Advertisement

Udayavani is now on Telegram. Click here to join our channel and stay updated with the latest news.

Next