Advertisement
ಡೆಲ್ಲಿ ಸಮರ್ಥ ತಂಡ: ಈ ಬಾರಿಯ ಐಪಿಎಲ್ ಕೂಟದಲ್ಲಿ ಸೈಲೆಂಟ್ ಆಗಿ ಆಟವಾಡುತ್ತಾ ಎಲ್ಲರ ಮನಗೆದ್ದಿರುವ ಡೆಲ್ಲಿ ಮೊದಲು ಪ್ಲೇ ಆಫ್ಗೆ ಪ್ರವೇಶ ಪಡೆಯುವ ಸೂಚನೆಯೊಂದನ್ನು ನೀಡಿದೆ. ಈಗಾಗಲೇ ಆಡಿದ 5 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 8 ಅಂಕದೊಂದಿಗೆ 2ನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಡೆಲ್ಲಿ ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನಕ್ಕೇರಿ ನಿಟ್ಟುಸಿರು ಬಿಡುವ ಯೋಜನೆ ಅಯ್ಯರ್ ಬಳಗದ್ದಾಗಿದೆ. ಡೆಲ್ಲಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಭಾರತೀಯರು ಮಿಂಚುತ್ತಿರುವುದು ತಂಡಕ್ಕೆ ಹೆಚ್ಚು ಸಹಕಾರಿಯಾಗಿದೆ.
ಶಾರ್ಜಾ ಮೈದಾನ ಟಿ20 ಮಾದರಿಯ ಕ್ರಿಕೆಟಿಗೆ ಹೇಳಿ ಮಾಡಿಸಿದಂತಿದೆ ಇಲ್ಲಿ ಹೊಡಿಬಡಿ ಆಟ ಸರ್ವೆಸಾಮಾನ್ಯ ಇಲ್ಲಿ ಆಡಿದ ಬಹುತೇಕ ಪಂದ್ಯಗಳಲ್ಲಿ 200 ಪ್ಲಸ್ ಮೊತ್ತ ದಾಖಲಾಗಿದ್ದರೂ ಚೇಸಿಂಗ್ ಮಾಡಿ ಎದುರಾಳಿ ತಂಡಗಳು ಗೆದ್ದ ಅದೆಷ್ಟೊ ನಿದರ್ಶನಗಳಿವೆ ಆದ್ದರಿಂದ ಈ ಪಂದ್ಯವೂ ಸಿಕ್ಸರ್ ಬೌಂಡರಿಗಳ ಸುರಿಮಳೆಗೆ ಕಮ್ಮಿ ಇರಲಾರದು. ರಾಜಸ್ಥಾನ ಇಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವುದರಿಂದ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ಸಾಧ್ಯತೆಯೂ ಹೆಚ್ಚಿದೆ ಎನ್ನಲಡ್ಡಿಯಿಲ್ಲ.
Related Articles
Advertisement
ರಾಜಸ್ಥಾನಕ್ಕೆ ಬ್ಯಾಟಿಂಗ್ ಚಿಂತೆ ಮೊದಲೆರಡು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಮಿಂಚಿದ್ದ ಸಂಜು ಸ್ಯಾಮ್ಸನ್, ನಾಯಕ ಸ್ಟೀವನ್ ಸ್ಮಿತ್ ಇದೀಗ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದು ತಂಡದ ವ್ಯವಸ್ಥಾಪಕರಿಗೆ ತಲೆನೋವು ತಂದಿದೆ. ಯುವ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ತಮ್ಮ ಅವಕಾಶವನ್ನು ಸಮರ್ಥಿ ಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಮೇಜರ್ ಬದಲಾವಣೆ ಮಾಡಿ ಯಶಸ್ಸು ಕಾಣದ ರಾಜಸ್ಥಾನ್ ಈ ಪಂದ್ಯಕ್ಕೂ ಕೆಲ ಬದಲಾವಣೆ ಮಾಡಿದರೂ ಅಚ್ಚರಿಯಿಲ್ಲ. ದುಬಾರಿ ಸ್ಪೆಲ್ ನಡೆಸಿದ ಅಂಕಿತ್ ರಜಪೂತ್ ಬದಲಿಗೆ ವರಣ್ ಆ್ಯರನ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಆರಂಭಿಕನಾಗಿ ಜೈಸ್ವಾಲ್ ಬದಲು ಮನನ್ ವೋಹ್ರಾ ಬ್ಯಾಟ್ ಬೀಸಲೂಬಹುದು.
ರಾಜಸ್ಥಾನ: ಜೈಸ್ವಾಲ್/ಮನನ್ ವೋಹ್ರಾ, ಸ್ಟೀವನ್ ಸ್ಮಿತ್ (ನಾಯಕ), ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್, ಮಹಿಪಾಲ್ ಲೊನ್ರೊರ್, ರಾಹುಲ್ ತೆವಾತಿಯ, ಜೋಫ್ರಾ ಆರ್ಚರ್, ಟಾಮ್ ಕರನ್, ಶ್ರೇಯಸ್ ಗೋಪಾಲ್, ಅಂಕಿತ್ ರಜಪೂತ್/ ವರುಣ್ ಆ್ಯರನ್ ಕಾರ್ತಿಕ್ ತ್ಯಾಗಿ.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಶಿಮ್ರಾನ್ ಹೆಟ್‌ಮೇರ್, ಮಾರ್ಕಸ್ ಸ್ಟೋಯಿನಿಸ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅನ್ರಿಚ್ ನೋರ್ಜೆ