Advertisement

Delhi ಭೇಟಿ ಫಲಪ್ರದ; ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ: ಯತ್ನಾಳ್

05:17 PM Jan 08, 2024 | Vishnudas Patil |

ವಿಜಯಪುರ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕರೆಯ ಮೇರೆಗೆ ನಾನು ದೆಹಲಿ ಹೋಗಿದ್ದು, ಭೇಟಿ ಫಲಪ್ರದವಾಗಿದೆ. ಪಕ್ಷದ ವರಿಷ್ಠರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದು, ನನಗೆ ಯಾರೂ ನೋಟೀಸ್, ಎಚ್ಚರಿಕೆ ನೀಡಿಲ್ಲ. ಬದಲಾಗಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಬಿಜೆಪಿ ಬಂಡಾಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕರೆಯ ಮೇರೆಗೆ ದೆಹಲಿಗೆ ಹೋಗಿದ್ದೆ. ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗ ಪಕ್ಷದ ಪ್ರಮುಖರಾದ ಅರುಣಸಿಂಗ್, ರಾಧಾಮೋಹನ ಅಗರವಾಲ್ ಅವರನ್ನು ಭೇಟಿ ಮಾಡಿದ ಬಳಿಕ ಗೃಹ ಸಚಿವ ಅಮಿತ ಶಾ ಹಾಗೂ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಬಂದಿದ್ದೇನೆ ಎಂದರು.

ಸುಮಾರು 25 ನಿಮಿಷಗಳ ಮಾತುಕತೆ ನಡೆದಿದ್ದು, ಕೋವಿಡ್ 40 ಸಾವಿರ ಕೋಟಿ ರೂ. ಹಗರಣ ಸೇರಿದಂತೆ ಎಲ್ಲವನ್ನೂ ವರಿಷ್ಠರ ಎದುರು ಪ್ರಸ್ತಾಪ ಮಾಡಿದ್ದೇನೆ. ಆದರೆ ಎಲ್ಲವನ್ನೂ ನಿಮ್ಮೊಂದಿಗೆ ಹೇಳಲಾಗದು. ಪಕ್ಷದ ವರಿಷ್ಠರಿಗೆ ನಾನು ಹೇಳಬೇಕಿಂದಿದ್ದ ಎಲ್ಲ ವಿಷಯಗಳನ್ನು ವರಿಷ್ಠರ ಎದುರು ಹೇಳಿದ್ದೇನೆ. ಭವಿಷ್ಯದ ದಿನಗಳಲ್ಲಿ ಎಲ್ಲವನ್ನೂ ಸರಿ ಮಾಡುವ ಭರವಸೆ ನೀಡಿದ್ದಾರೆ. ನೀವು ಏನೇ ಹೇಳುವುದಿದ್ದರೂ ನನಗೆ ನೇರವಾಗಿ ಹೇಳಿ, ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ನನಗೆ ಪಕ್ಷದ ಯಾವೊಬ್ಬ ನಾಯಕರೂ ನೋಟೀಸ್ ನೀಡುವ ಅಥವಾ ಎಚ್ಚರಿಕೆ ನೀಡುವ ಕೆಲಸ ಮಾಡಿಲ್ಲ. ಬದಲಾಗಿ ಪಕ್ಷದ ರಾಷ್ಟ್ರೀಯ ನಾಯಕರು ನನ್ನೊಂದಿಗೆ ಅತ್ಯಂತ ಗೌರವಯುತ ಹಾಗೂ ಸೌಜನ್ಯದಿಂದಲೇ ಮಾತನಾಡಿದ್ದಾರೆ ಎಂದರು.

ಭೇಟಿಗೆ ಬರುವುದಿದ್ದರೆ ಎರಡು ದಿನ ಮೊದಲೇ ಹೇಳಿದರೆ ಸಮಯ ನೀಡುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ. ಆದರೆ ನೀವು ವಿಜಯೇಂದ್ರ, ಯಡಿಯೂಪ್ಪ ಅವರಿಗೆ ಮಾತ್ರ ಅವಕಾಶ ನೀಡುತ್ತೀರಿ, ನಮಗೆ ನಿಮ್ಮ ಭೇಟಿಗೆ ಸಮಯ ನೀಡುವುದಿಲ್ಲ ಎಂದಿದ್ದೆ. ಹೀಗಾಗಿ ಎರಡು ದಿನ ಮೊದಲೇ ಹೇಳಿದರೆ ಸಮಯ ನೀಡುವುದಾಗಿ ಸ್ಪಂದಿಸಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next