Advertisement

ದಿಲ್ಲಿ ತರಕಾರಿಗಳು ವಿಷಮಯ

09:42 AM Jul 29, 2019 | sudhir |

ಹೊಸದಿಲ್ಲಿ: ಯಮುನಾ ನದಿ ತೀರಗಳಲ್ಲಿ ಬೆಳೆಯಲಾಗುತ್ತಿರುವ ತರಕಾರಿಗಳಲ್ಲಿ ಲೋಹಗಳ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿ ಇರುವುದನ್ನು ನ್ಯಾಷನಲ್‌ ಎನ್ವಿರಾನ್‌ಮೆಂಟಲ್‌ ಇಂಜಿನಿಯರಿಂಗ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌ (ಎನ್‌ಇಇಆರ್‌ಐ) ಪತ್ತೆ ಹಚ್ಚಿದ್ದು, ಇಂಥ ತರಕಾರಿಗಳ ದೀರ್ಘ‌ಕಾಲದ ಸೇವನೆಯಿಂದ ಕ್ಯಾನ್ಸರ್‌ನಂಥ ಮಾರಕ ರೋಗಗಳಿಗೆ ಜನರು ಬಲಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದೆ.

Advertisement

ಉಸ್ಮಾನ್‌ಪುರ ಖದರ್‌, ಗೀತಾ ಕಾಲೋನಿ ಹಾಗೂ ಮಯೂರ್‌ ವಿಹಾರ್‌ಗಳಲ್ಲಿ ಮಾರಾಟವಾಗುತ್ತಿರುವ ಸೊಪ್ಪು³, ತರಕಾರಿಗಳನ್ನು ಎನ್‌ಇಇಆರ್‌ಐ ಪರೀಕ್ಷಿಸಿದ್ದು, ಇವುಗಳಲ್ಲಿ ಸೀಸ, ನಿಕ್ಕೆಲ್‌, ಕ್ಯಾಡ್ಮಿಯಂ, ಪಾದರಸದಂತಹ ಅಪಾಯಕಾರಿ ಲೋಹಗಳು ಗಣನೀಯ ಪ್ರಮಾಣದಲ್ಲಿ ಇರುವುದು ತಿಳಿದುಬಂದಿದೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. ತರಕಾರಿಗಳಲ್ಲಿ ಸೀಸದ ಅಂಶವು ಕೆ.ಜಿ.ಗೆ 2.3 ಎಂ.ಜಿ.ಯಷ್ಟಿರಬೇಕು. ಅದರೆ, ಈ ತರಕಾರಿ ಗಳಲ್ಲಿ 2.5ರಿಂದ 13.8 ಎಂಜಿ/ಕೆ.ಜಿ. ಇರು ವುದು ಕಂಡುಬಂದಿದೆ ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next