Advertisement

Delhi; ಬಂಧಿತ ಮೂರು ಐಸಿಸ್‌ ಉಗ್ರರು ಇಂಜಿನಿಯರ್ ಗಳು; ಓರ್ವ ಪಿಎಚ್ ಡಿ ವಿದ್ಯಾರ್ಥಿ

05:37 PM Oct 02, 2023 | Team Udayavani |

ಹೊಸದಿಲ್ಲಿ: ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಐಸಿಸ್‌ ಜಾಲವನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ಬಂಧಿತರಾಗಿರುವ ಮೂವರು ಭಯೋತ್ಪಾದಕ ಶಂಕಿತರು ಶಿಕ್ಷಣದಲ್ಲಿ ಇಂಜಿನಿಯರ್‌ ಗಳಾಗಿದ್ದು, ಬಾಂಬ್‌ಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ದೆಹಲಿ ಪೊಲೀಸ್ ವಿಶೇಷ ಸೆಲ್ ನ ಹಿರಿಯ ಅಧಿಕಾರಿ ಎಚ್‌ಜಿಎಸ್ ಧಲಿವಾಲ್ ಅವರು, ಇಂದು ಬಂಧಿಸಲಾದ ಮೂವರು ಭಯೋತ್ಪಾದಕ ಶಂಕಿತರಲ್ಲಿ ಒಬ್ಬರಾದ ಮೊಹಮ್ಮದ್ ಶಹನವಾಜ್ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದರು. ದೇಶದ ವಿವಿಧ ಭಾಗಗಳಲ್ಲಿ ನಡೆದ ಸ್ಫೋಟಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಹನವಾಜ್ ಮತ್ತು ಇತರ ಇಬ್ಬರ ಬಗ್ಗೆ ಮಾಹಿತಿ ನೀಡಿದವರಿಗೆ ಎನ್‌ಐಎ ಕಳೆದ ತಿಂಗಳು ತಲಾ 3 ಲಕ್ಷ ನಗದು ಬಹುಮಾನ ಘೋಷಿಸಿತ್ತು.

ಇತರ ಇಬ್ಬರು ಬಂಧಿತರು ಶಾನವಾಜ್ ಅವರ ಸಹಚರರಾದ ಮೊಹಮ್ಮದ್ ರಿಜ್ವಾನ್ ಅಶ್ರಫ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿ ಎಂದು ಧಲಿವಾಲ್ ಹೇಳಿದರು.

ಇದನ್ನೂ ಓದಿ:Rajasthan ; ಗೆಹ್ಲೋಟ್ ಈಗಾಗಲೇ ಸೋಲನ್ನು ಒಪ್ಪಿಕೊಂಡಾಗಿದೆ: ಪ್ರಧಾನಿ ಮೋದಿ

ಶಹನವಾಜ್ ನನ್ನು ಸೋಮವಾರ ದೆಹಲಿಯ ಜೈತ್‌ಪುರದಲ್ಲಿ ಬಂಧಿಸಿದರೆ, ರಿಜ್ವಾನ್ ಮತ್ತು ಅಶ್ರಫ್ ಅವರನ್ನು ಕ್ರಮವಾಗಿ ಲಕ್ನೋ ಮತ್ತು ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ಬಂಧಿಸಲಾಯಿತು.

Advertisement

ಶಾನವಾಜ್‌ ನ ದೆಹಲಿ ಅಡಗುತಾಣದಲ್ಲಿ ಪಾಕಿಸ್ತಾನದಿಂದ ತಂದ ಪಿಸ್ತೂಲ್, ಬಾಂಬ್ ತಯಾರಿಕೆಗೆ ಬಳಸುವ ವಸ್ತುಗಳು, ರಾಸಾಯನಿಕಗಳು ಮತ್ತು ಜಿಹಾದಿ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ತಮ್ಮ ಐಸಿಸ್ ಹ್ಯಾಂಡ್ಲರ್‌ ನೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ನಿಯಮಿತವಾಗಿ ವರದಿಗಳನ್ನು ಹಂಚಿಕೊಳ್ಳುತ್ತಿದ್ದರು. ಅವರ ಕೆಲಸದಲ್ಲಿ ಬಾಹ್ಯ ಪಾತ್ರವು ಬಹಿರಂಗವಾಗದಂತೆ ಸ್ಥಳೀಯವಾಗಿ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಖರೀದಿಸಲು ಅವರಿಗೆ ಸೂಚಿಸಲಾಗಿತ್ತು ಎಂದು ಪೋಲಿಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next