Advertisement

Delhi: ಎರಡನೇ ಮಹಡಿಯಿಂದ ತಲೆ ಮೇಲೆ ಬಿದ್ದ ಎಸಿ; ಕೆಳಗೆ ನಿಂತಿದ್ದ ಯುವಕ ಸಾವು

09:46 AM Aug 19, 2024 | Team Udayavani |

ದೆಹಲಿ: ಎರಡನೇ ಮಹಡಿಯಿಂದ ಎಸಿಯೊಂದು ತಲೆ ಮೇಲೆ ಬಿದ್ದ ಪರಿಣಾಮ 18 ವರ್ಷದ ಯುವಕ ಮೃತಪಟ್ಟಿರುವ ಘಟನೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಶನಿವಾರ (ಆ.17ರಂದು) ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಜಿತೇಶ್ ಚಡ್ಡಾ(18) ಎನ್ನುವ ಯುವಕ ಸ್ಕೂಟರ್‌ ನಲ್ಲಿ ಕೂತು ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದ. ಈ ವೇಳೆ ಕಟ್ಟಡವೊಂದರ ಎರಡನೇ ಮಹಡಿಯಿಂದ ಎಸಿಯೊಂದು ನೇರವಾಗಿ ಯುವಕರಿಬ್ಬರ ಮೇಲೆ ಬಿದ್ದಿದೆ. ಪರಿಣಾಮ ಜಿತೇಶ್‌ ಹಾಗೂ ಆತನ ಸ್ನೇಹಿತ ಪ್ರಾಂಶು ನೆಲಕ್ಕೆ ಬಿದ್ದಿದ್ದಾರೆ.

ಕೂಡಲೇ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯೆಯೇ ಜಿತೇಶ್‌ ಮೃತಪಟ್ಟಿದ್ದಾರೆ. ಅವರ ಸ್ನೇಹಿತನಿಗೆ ಚಿಕಿತ್ಸೆ ಮುಂದುವರೆಸಿದ್ದು ಅವನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ.

Advertisement

ಡಿಬಿಜಿ ರಸ್ತೆಯಲ್ಲಿರುವ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸಿ ಅಪಘಾತದ ಕಾರಣವನ್ನು ಪರಿಶೀಲಿಸಲು ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದೆ. ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next