ನವದೆಹಲಿ : ಯುವಕನಿಗೆ ಮೆಸೇಜ್ ಮಾಡಲಿಲ್ಲ ಎಂಬ ಕಾರಣಕ್ಕೆ 16 ವರ್ಷದ ಬಾಲಕಿಯ ಮೇಲೆ ಮೂವರು ವ್ಯಕ್ತಿಗಳು ಗುಂಡು ಹಾರಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಘಟನೆ ಕುರಿತು ದೆಹಲಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು ಇನ್ನೋರ್ವನ ಪತ್ತೆಗೆ ಬಲೆ ಬೀಸಿದ್ದಾರೆ.
ಘಟನೆ ವಿವರ : ಅರ್ಮಾನ್ ಆಲಿ ಎಂಬ ವ್ಯಕ್ತಿ ಈ ಬಾಲಕಿಯ ಜೊತೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯಸ್ಥನಾಗಿ ಕಳೆದ ಎರಡು ವರ್ಷಗಳಿಂದ ಸಂಪರ್ಕದಲ್ಲಿದ್ದ ಅಲ್ಲದೆ ಬಾಲಕಿಯ ಜೊತೆ ಮೆಸೇಜ್ ಮಾಡಿಕೊಂಡು ಇದ್ದ ಎನ್ನಲಾಗಿದೆ, ಆದರೆ ಕೆಲವು ತಿಂಗಳ ಹಿಂದೆ ಬಾಲಕಿ ಅರ್ಮಾನ್ ಮಾಡಿದ ಮೆಸೇಜ್ ಗೆ ಉತ್ತರಿಸಿರಲಿಲ್ಲ ಇದರಿಂದ ಕೋಪಗೊಂಡ ಅರ್ಮಾನ್ ತನ್ನ ಸ್ನೇಹಿತರ ಜೊತೆಗೂಡಿ ಬಾಲಕಿಯನ್ನು ಕೊಲ್ಲಲು ನಿರ್ಧರಿಸಿದ್ದ ಎನ್ನಲಾಗಿದೆ .
ಕಳೆದ ಗುರುವಾರದಂದು ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿರುವ ಶಾಲೆಯಿಂದ ಬಾಲಕಿ ಮನೆಗೆ ಬರುತ್ತಿದ್ದ ವೇಳೆ ಬಾಲಕಿಯ ಮೇಲೆ ಯುವಕರ ತಂಡ ಗುಂಡು ಹಾರಿಸಿದೆ, ಈ ವೇಳೆ ಬಾಲಕಿಯ ಭುಜಕ್ಕೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡ್ದೆಯುತ್ತಿದ್ದಾಳೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಬಾಬಿ ಮತ್ತು ಪವನ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು ಓರ್ವ ಪ್ರಮುಖ ಆರೋಪಿಯಾದ ಅರ್ಮಾನ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರ ತನಿಖೆ ವೇಳೆ ತನ್ನ ಗೆಳೆಯನಿಗೆ ಬಾಲಕಿ ಮೆಸೇಜ್ ಮಾಡಿಲ್ಲ ಎಂಬ ಕಾರಣಕ್ಕೆ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ,
ದೆಹಲಿ ಪೊಲೀಸರು ಅರ್ಮಾನ್ ಪತ್ತೆಗೆ ಬಲೆಬೀಸಿದ್ದಾರೆ.
ಗುಂಡೇಟು ತಗುಲಿ ಆಸ್ಪತ್ರೆಗೆ ದಾಖಲಾದ ಬಾಲಕಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ.