Advertisement

ದೆಹಲಿ ಶಾಲಾ ಬಾಲಕಿಯ ಮೇಲೆ ಗುಂಡು; ಪ್ರಮುಖ ಆರೋಪಿ ಬಂಧನ

04:58 PM Sep 01, 2022 | Team Udayavani |

ನವದೆಹಲಿ : ದಕ್ಷಿಣ ದೆಹಲಿಯ ಸಂಗಮ್ ವಿಹಾರ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಗುಂಡು ಹಾರಿಸಿದ ಕೆಲವು ದಿನಗಳ ನಂತರ, ಅವಳನ್ನು ಕೊಲ್ಲಲು ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಅಮಾನತ್ ಅಲಿ (19) ಎಂಬಾತನನ್ನು ಬುಧವಾರ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ ಇಬ್ಬರು ಆರೋಪಿಗಳಾದ ಬಾಬಿ (24) ಮತ್ತು ಪವನ್ ಅಲಿಯಾಸ್ ಸುಮಿತ್ (19) ಅವರನ್ನು ಪೊಲೀಸರು ಬಂಧಿಸಿದ್ದರು.

ಪೊಲೀಸರ ಪ್ರಕಾರ, ಅಲಿ ಒಂದೆರಡು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿಯ ಸಂಪರ್ಕಕ್ಕೆ ಬಂದಿದ್ದನು.ಅವಳು ಸುಮಾರು ಆರು ತಿಂಗಳ ಹಿಂದೆ ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು, ನಂತರ ಅವನು ಅವಳ ವಿರುದ್ಧ ದ್ವೇಷ ಸಾಧಿಸಿ ಆಕೆಯನ್ನು ಕೊಲ್ಲಲು ನಿರ್ಧರಿಸಿ ಬಾಬಿ ಮತ್ತು ಪವನ್ ನನ್ನು ಸಂಪರ್ಕಿಸಿದ್ದ ಎನ್ನಲಾಗಿದೆ.

ಆರೋಪಿಗಳಿಗೆ ಕಠಿಣ ಶಿಕ್ಷೆ

ದೆಹಲಿ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಗಸ್ಟ್ 25 ರ ಮಧ್ಯಾಹ್ನ ಭುಜದ ಮೇಲೆ ಗುಂಡು ತಗುಲಿದ ಸಂತ್ರಸ್ತೆಗೆ ತಮ್ಮ ಸರ್ಕಾರ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ನೀಡಲಿದೆ ಎಂದು ಹೇಳಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

Advertisement

ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ಟಿಗ್ರಿ ಠಾಣೆಯ ಪೊಲೀಸರು ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಂತರ, ವಿಧಿ ವಿಜ್ಞಾನ ತಂಡವು ಸ್ಥಳದಿಂದ ಖಾಲಿ ಕಾರ್ಟ್ರಿಡ್ಜ್ ಅನ್ನು ವಶಪಡಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next