Advertisement

ದೆಹಲಿಯಲ್ಲಿ ಮತ್ತೆ 4 ಒಮಿಕ್ರಾನ್ ಸೋಂಕು ಪತ್ತೆ, ಒಟ್ಟು ಸಂಖ್ಯೆ ಆರಕ್ಕೆ ಏರಿಕೆ

02:29 PM Dec 14, 2021 | Team Udayavani |

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೋವಿಡ್ ನ ನೂತನ ರೂಪಾಂತರ ತಳಿ ಒಮಿಕ್ರಾನ್ ಸೋಂಕಿನ ನಾಲ್ಕು ಪ್ರಕರಣ ಪತ್ತೆಯಾಗಿರುವುದಾಗಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಂಗಳವಾರ(ಡಿಸೆಂಬರ್ 14) ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಕಲಬುರಗಿ-ಯಾದಗಿರಿ ಪರಿಷತ್ ಚುನಾವಣೆ: ಬಿಜೆಪಿಯ ಬಿ.ಜಿ.ಪಾಟೀಲ್ ಪ್ರಯಾಸದ ಗೆಲುವು

ನಾಲ್ವರು ವಿದೇಶದಿಂದ ಬಂದವರಾಗಿದ್ದಾರೆ. ಒಮಿಕ್ರಾನ್ ಸೋಂಕು ಈವರೆಗೂ ಸಾರ್ವಜನಿಕವಾಗಿ ಹರಡಿಲ್ಲ, ಅಲ್ಲದೇ ಒಮಿಕ್ರಾನ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜೈನ್ ಹೇಳಿದರು.

ದೆಹಲಿಯಲ್ಲಿ ಈವರೆಗೆ ಒಟ್ಟು ಆರು ಒಮಿಕ್ರಾನ್ ಸೋಂಕು ಪ್ರಕರಣ ಪತ್ತೆಯಾದಂತಾಗಿದೆ. ಲೋಕ ನಾಯಕ್ ಜೈಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ 35 ಕೋವಿಡ್ 19 ಸೋಂಕಿತರು ಹಾಗೂ ಒಮಿಕ್ರಾನ್ ಶಂಕಿತ ಮೂವರು ದಾಖಲಾಗಿದ್ದಾರೆ.

ಈಗಾಗಲೇ ದೆಹಲಿಯಲ್ಲಿ ಪತ್ತೆಯಾದ ಮೊದಲ ಒಮಿಕ್ರಾನ್ ಸೋಂಕಿತ 37 ವರ್ಷದ ವ್ಯಕ್ತಿಯನ್ನು ಲೋಕ ನಾಯಕ್ ಜೈಪ್ರಕಾಶ್ ನಾರಾಯಣ್ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗಿದೆ. ಈ ವ್ಯಕ್ತಿ ರಾಂಚಿ ನಿವಾಸಿಯಾಗಿದ್ದು, ತಾಂಜೆನಿಯಾದಿಂದ ದೋಹಾಕ್ಕೆ ಬಂದಿದ್ದು, ಅಲ್ಲಿಂದ ದೆಹಲಿಗೆ ಕತಾರ್ ಏರ್ ವೇಸ್ ನಲ್ಲಿ ಡಿಸೆಂಬರ್ 2ರಂದು ಬಂದಿದ್ದರು. ತಪಾಸಣೆ ವೇಳೆ ಒಮಿಕ್ರಾನ್ ಸೋಂಕು ಪತ್ತೆಯಾಗಿತ್ತು ಎಂದು ಜೈನ್ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next