Advertisement

Threat: ದೆಹಲಿಯ ಶಾಲೆಗೂ ಬಾಂಬ್ ಬೆದರಿಕೆ.. ಮಕ್ಕಳ ಸ್ಥಳಾಂತರ, ಬಾಂಬ್‌ ನಿಷ್ಕ್ರಿಯ ತಂಡ ದೌಡು

01:10 PM Feb 02, 2024 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿಯ ಆರ್‌ಕೆ ಪುರಂ ಪ್ರದೇಶದಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‌ಗೆ ಶುಕ್ರವಾರ ಬಾಂಬ್ ಬೆದರಿಕೆ ಕರೆಯೊಂದು ಬಂದಿದ್ದು ಶಾಲೆಯ ಆವರಣದ ಸುತ್ತ ಆತಂಕದ ವಾತಾವರಣ ಸೃಷ್ಟಿಯಾಗಿದೆ.

Advertisement

ಇಂದು ಬೆಳಿಗ್ಗೆ ಸುಮಾರು ಹತ್ತು ಗಂಟೆಯ ವೇಳೆಗೆ ಶಾಲೆಯ ಕಚೇರಿಗೆ ಬಂದ ಇ ಮೇಲ್ ಸಂದೇಶದಲ್ಲಿ ಶಾಲೆಗೆ ಬಾಂಬ್ ಇಡುವ ಕುರಿತು ಬೆದರಿಕೆ ಸಂದೇಶ ಬಂದಿದೆ ಇದರ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಮಕ್ಕಳ ಪೋಷಕರಿಗೆ ಕರೆ ಮಾಡಿ ಮಕ್ಕಳನ್ನು ಕರೆದೊಯ್ಯುವಂತೆ ಸೂಚಿಸಿದೆ.

ಘಟನೆಗೆ ಸಂಬಂಧಿಸಿ ಪೊಲೀಸರಿಗೂ ಮಾಹಿತಿಯನ್ನು ನೀಡಲಾಯಿತು ಕೂಡಲೇ ಶಾಲೆಯತ್ತ ಧಾವಿಸಿದ ಪೊಲೀಸರ ತಂಡ ಶಾಲೆಗಳನ್ನು ಸುತ್ತುವರೆದು ಶೋಧ ಕಾರ್ಯ ನಡೆಸಿದೆ ಆದರೆ ಎಲ್ಲೂ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು ಹೆಚ್ಚಿನ ತಪಾಸಣೆ ನಡೆಸುತ್ತಿದ್ದಾರೆ.

ಮುಂಬೈನಲ್ಲೂ ಬೆದರಿಕೆ ಸಂದೇಶ
ವಾಣಿಜ್ಯ ನಗರಿ ಮುಂಬೈನ ಆರು ಸ್ಥಳಗಳಲ್ಲಿ ಬಾಂಬ್‌ ಗಳನ್ನು ಇಡಲಾಗಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ಶುಕ್ರವಾರ ಮುಂಜಾನೆ ಮುಂಬೈ ಟ್ರಾಫಿಕ್‌ ಪೊಲೀಸ್‌ ಕಂಟ್ರೋಲ್‌ ರೂಂಗೆ ಬೆದರಿಕೆ ಸಂದೇಶವನ್ನು ರವಾನಿಸಿದ್ದಾನೆ, ಇದರ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಬಾಂಬ್‌ ನಿಷ್ಕ್ರಿಯ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ ಆದರೆ ಇಲ್ಲೂ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Poonam Pandey: 32 ವರ್ಷಕ್ಕೆ ಇಹಲೋಕ ತ್ಯಜಿಸಿದ ನಟಿ ಪೂನಂ ಪಾಂಡೆ; ಅಭಿಮಾನಿಗಳಿಗೆ ಆಘಾತ!

Advertisement
Advertisement

Udayavani is now on Telegram. Click here to join our channel and stay updated with the latest news.

Next