ನವದೆಹಲಿ: ಶಸ್ತ್ರಾಸ್ತ್ರ ಪರವಾನಗಿಯನ್ನು ಸ್ಮಾರ್ಟ್ ಕಾರ್ಡ್ ರೂಪದಲ್ಲಿ ನೀಡಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಇಂತಹ ನಿರ್ಧಾರ ಕೈಗೊಂಡ ದೇಶದ ಮೊದಲ ಪೊಲೀಸ್ ಘಟಕ ಎಂಬ ಹೆಗ್ಗಳಿಕೆಯನ್ನು ದೆಹಲಿ ಪೊಲೀಸರು ಪಡೆದುಕೊಂಡಿದ್ದಾರೆ.
ಇದುವರೆಗೆ ಈ ಪರವಾನಗಿಯನ್ನು ಬುಕ್‌ಲೆಟ್ ರೂಪದಲ್ಲಿ ನೀಡಲಾಗುತ್ತಿತ್ತು. ಇದನ್ನು ಇಟ್ಟುಕೊಂಡು ತಿರುಗುವುದು ಕಿರಿಕಿರಿ ಎನಿಸುವುದು ಒಂದು ಸಮಸ್ಯೆಯಾದರೆ, ಕಳೆದುಹೋಗುವ ಭೀತಿಯೂ ಪರವಾನಗಿ ಪಡೆದವರಿಗೆ ಕಾಡುತ್ತಿತ್ತು. ಹಾಗಾಗಿ, ಸ್ಮಾರ್ಟ್ ಕಾರ್ಡ್ ರೂಪದ ಪರವಾನಗಿ ನೀಡಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ:ವಿಶ್ವದ ಅತ್ಯಂತ ಕಲುಷಿತ ನದಿ ಪಾಕಿಸ್ಥಾನದಲ್ಲಿ: ಅಧ್ಯಯನ ವರದಿ
ಸ್ಮಾರ್ಟ್‌ಕಾರ್ಡ್‌ನಲ್ಲಿ ಪರವಾನಗಿದಾರರ ಎಲ್ಲಾ ಮಾಹಿತಿಗಳು ಇರಲಿದ್ದು ಅವು ಸುರಕ್ಷಿತವಾಗಿಯೂ ಇರಲಿವೆ ಎಂದು ಮೂಲಗಳು ತಿಳಿಸಿವೆ.