Advertisement

ದಿಲ್ಲಿಯಲ್ಲಿ ರಿವರ್ಸ್‌ ಲವ್‌ ಜಿಹಾದ್‌: ಹಿಂದೂ ಪ್ರಿಯಕರನ ಹತ್ಯೆ

04:44 PM Feb 03, 2018 | Team Udayavani |

ಹೊಸದಿಲ್ಲಿ : ದಿಲ್ಲಿಯಲ್ಲಿ ರಿವರ್ಸ್‌ ಲವ್‌ ಜಿಹಾದ್‌ ಪ್ರಕರಣವೊಂದು ವರದಿಯಾಗಿದೆ.  

Advertisement

ಇಲ್ಲಿನ ಓರ್ವ ವೃತ್ತಿಪರ ಫೋಟೋಗ್ರಾಫ‌ರ್‌ನನ್ನು ಆತನ ಮುಸ್ಲಿ ಗರ್ಲ್ ಫ್ರೆಂಡ್‌ ಮನೆಯವರು ಇರಿದು ಕೊಂದಿರುವುದಾಗಿ ವರದಿಯಾಗಿದೆ. ಈ ಕೊಲೆ ಪ್ರಕರಣದಿಂದಾಗಿ ಇಲ್ಲೀಗ ಕೋಮು ಉದ್ರಿಕ್ತತೆ ತಲೆದೋರಿದ್ದು  ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. 

ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಮುಸ್ಲಿಂ ಮಹಿಳೆಯ ತಾಯಿ, ತಂದೆ, ಅಣ್ಣ ಮತ್ತು ಚಿಕ್ಕಪ್ಪನನ್ನು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ.

20 ವರ್ಷದ ತನ್ನ ಮುಸ್ಲಿಂ ಗರ್ಲ್ ಫ್ರೆಂಡ್‌ ಶೆಹಾಜಾದಿ ಯೊಂದಿಗೆ 23ರ ಹರೆಯದ ಅಂಕಿತ್‌ ಸಕ್ಸೇನಾ ನಿಗೆ ಕಳೆದ ಮೂರು ವರ್ಷಗಳಿಂದಲೂ ಪ್ರೇಮ ಸಂಬಂಧವಿತ್ತು. ಇವರಿಬ್ಬರೂ ನೆರಕರೆಯವರಾಗಿದ್ದು ಡೇಟಿಂಗ್‌ ನಡೆಸುತ್ತಿದ್ದರು. ಇವರ ಪ್ರೇಮ ಸಂಬಂಧಕ್ಕೆ ಹುಡುಗಿಯ ಮನೆಯವರ ತೀವ್ರ ವಿರೋಧವಿತ್ತು.

ಗುರುವಾರ ರಾತ್ರಿ 9 ಗಂಟೆಯ ಸುಮಾರಿಗೆ ಶೆಹಜಾದಿ ಮನೆಯವರು ಅಂಕಿತ್‌ ಮನೆ ಮುಂದೆ ಜಮಾಯಿಸಿ ಆತನನ್ನು ಹೊರಗೆ ಬರುವಂತ ಕೂಗಿದರು. ಅಂತೆಯೇ ಆತ ಹೊರ ಬಂದಾಗ ಶೆಹಜಾದಿ ಮನೆಯವರು ಆತನ ಮೇಲೆ ಮಾರಣಾಂತಿ ಹಲ್ಲೆ ಮಾಡಿದರು; ಚೂರಿಯಿಂದ ಆತನ ಕತ್ತು ಸೀಳಿದರು ಎಂದು ಆತನ ಕುಟುಂಬದವರು ಹೇಳಿದ್ದಾರೆ. 

Advertisement

ಮಗನನ್ನು ಪಾರು ಮಾಡಲು ಅಂಕಿತ್‌ ತಾಯಿ ಮನೆಯಿಂದ ಹೊರಗೋಡಿ ಬಂದಾಗ ಅಂಕಿತ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದ. ರಸ್ತೆ ತುಂಬ ರಕ್ತ ಕೋಡಿ ಹರಿದಿತ್ತು.

ಆ ಹೊತ್ತಿಗೆ ಶೆಹಜಾದಿ, ಅಂಕಿತ್‌ ಗಾಗಿ ಪಶ್ಚಿಮ ದಿಲ್ಲಿಯ ಮೆಟ್ರೋ ಸ್ಟೇಶನ್‌ ಬಲಿ ಕಾಯುತ್ತಿದ್ದಳು ಎನ್ನಲಾಗಿದೆ. 

ಅಂಕಿತ್‌ ಸಕ್ಸೇನಾ ಕೊಲೆಯಿಂದಾಗಿ ಈ ಪ್ರದೇಶದಲ್ಲೀಗ ಉದ್ರಿಕ್ತತೆ ತಲೆದೋರಿದೆ. ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next