ನವದೆಹಲಿ: ಮೊದಲ ಮುಂಗಾರು ಮಳೆಗಾಗಿ ದೆಹಲಿ, ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಜುಲೈವರೆಗೆ ಕಾಯಬೇಕಾಗುತ್ತದೆ ಎಂದು ಭಾರತ ಹವಾಮಾನ ಇಲಾಖೆ ಶುಕ್ರವಾರ(ಜೂನ್ 25) ತಿಳಿಸಿದೆ.
ಇದನ್ನೂ ಓದಿ:ದೆಹಲಿಗೆ ಹಾರಿದ ವಿಜಯೇಂದ್ರ: ಯಡಿಯೂರಪ್ಪ ಭೇಟಿಯಾದ ಭೂಪೇಂದ್ರ ಯಾದವ್!
ಇತ್ತೀಚೆಗಿನ ಹವಾಮಾನ ವರದಿ ಪ್ರಕಾರ ಗಾಳಿ ವ್ಯವಸ್ಥೆ ಮುಂದಿನ ಏಳು ದಿನಗಳ ಕಾಲ ಈ ಪ್ರದೇಶಗಳನ್ನು ಆವರಿಸುವ ಸಾಧ್ಯತೆ ಕಡಿಮೆ ಇದ್ದಿರುವುದಾಗಿ ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ನೈರುತ್ಯ ಮುಂಗಾರು ಪ್ರಸ್ತುತ ಬಾರ್ಮರ್, ಭಿಲ್ವಾರಾ, ಧೋಲ್ಪುರ್, ಅಲಿಗಢ್, ಮೀರತ್, ಅಂಬಾಲಾ ಮತ್ತು ಅಮೃತ್ ಸರ್ ಹಾದು ಹೋಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪ್ರಸ್ತುತ ಹವಾಮಾನ ಪರಿಸ್ಥಿತಿ ಪೂರಕವಾಗಿಲ್ಲದ ಕಾರಣ ರಾಜಸ್ಥಾನ್, ಹರ್ಯಾಣ, ಚಂಡೀಗಢ್, ದೆಹಲಿ ಮತ್ತು ಪಂಜಾಬ್ ಭಾಗಗಳಲ್ಲಿ ಮುಂದಿನ ಒಂದು ವಾರಗಳ ಕಾಲ ಮುಂಗಾರು ಮಳೆ ವಿಳಂಬವಾಗಿ ಪ್ರವೇಶಿಸಲಿದೆ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 30ರ ವಾರಾಂತ್ಯದಲ್ಲಿ ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಗುಡುಗು, ಮಿಂಚಿನೊಂದಿಗೆ ಭಾರೀ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಈವರೆಗೆ ಶೇ.28ರಷ್ಟು ಮುಂಗಾರು ಮಳೆ ಸುರಿದಿರುವುದಾಗಿ ಹವಾಮಾನ ಇಲಾಖೆ ವಿವರಿಸಿದೆ.