Advertisement

ದಿಲ್ಲಿ : ತೈಲ ಟ್ಯಾಂಕರ್‌ ಮಗುಚಿ 20,000 ಲೀ. ಪೆಟ್ರೋಲ್‌ ವ್ಯರ್ಥ

11:39 AM Jun 20, 2017 | Team Udayavani |

ಹೊಸದಿಲ್ಲಿ : ಇಂದು ಮಂಗಳವಾರ ಬೆಳಗ್ಗೆ ಇಲ್ಲಿನ ಮೂಲ್‌ಚಂದ್‌ ಅಂಡರ್‌ಪಾಸ್‌ನಲ್ಲಿ ತೈಲ ಟ್ಯಾಂಕರ್‌ ಮಗುಚಿ ಬಿದ್ದ ಪರಿಣಾಮವಾಗಿ 20,000 ಲೀಟರ್‌ ಪೆಟ್ರೋಲ್‌ ರಸ್ತೆಯಲ್ಲಿ ಚೆಲ್ಲಿ ಹೋಯಿಲ್ಲದೆ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಯಿತು.

Advertisement

ತೈಲ ಟ್ಯಾಂಕರ್‌ನ ಚಾಲಕ, ಹೆಲ್ಪರ್‌ ಈ ದುರಂತದಲ್ಲಿ ಗಾಯಗೊಂಡರು. ದಿಲ್ಲಿಯ ಮುಖ್ಯ ವಾಹಿನಿಯಾಗಿರುವ ರಿಂಗ್‌ ರೋಡ್‌ ಬ್ಲಾಕ್‌ ಆಗಿ ಈ ಪ್ರದೇಶದಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಯಿತು.

ರಸ್ತೆಯಲ್ಲಿ  ಭಾರೀ ಪ್ರಮಾಣದ ಪೆಟ್ರೋಲ್‌ ಚೆಲ್ಲಿಹೋಗಿರುವ ಕಾರಣ ಯಾವುದೇ ಸಂಭವನೀಯ ಅಗ್ನಿ ಆಕಸ್ಮಿಕಗಳು ಘಟಿಸದಂತೆ ಮುನ್ನೆಚ್ಚರಿಕೆ ವಹಿಸಲು ಪೊಲೀಸರು ಇಡಿಯ ಪ್ರದೇಶವನ್ನು ಸುತ್ತು ವರಿದರು. 

ದಿಲ್ಲಿ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಜತೆಗೂಡಿ ಮಗುಚಿ ಬಿದ್ದ ತೈಲ ಟ್ಯಾಂಕರ್‌ ಅನ್ನು ರಸ್ತೆಯಿಂದ ಬದಿಗೆ ಸರಿಸಿ ವಾಹನ ಸಂಚಾರ ಅಡಚಣೆಯನ್ನು ತೆರವುಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next