Advertisement
ವಿಶೇಷವೆಂದರೆ, ಈ ಪಾರ್ಕ್‌ನಲ್ಲಿ ನೀವು ಜಗದ್ವಿಖ್ಯಾತ ಪಾರಂಪರಿಕ ತಾಣಗಳ ಪ್ರತಿಕೃತಿಗಳನ್ನು ನೋಡಬಹುದು. ಸುಮಾರು 9ರಿಂದ 10 ಎಕರೆ ಪ್ರದೇಶದಲ್ಲಿ ಪಾರ್ಕ್ ಸ್ಥಾಪಿಸಲಾಗುತ್ತದೆ.
ಸಿಡ್ನಿಯ ಒಪೇರಾ ಹೌಸ್, ಗಿಜಾದ ಗ್ರೇಟ್ ಸಿ#ಂಕ್ಸ್, ಚೀನಾದ ಮಹಾಗೋಡೆ, ಬಾರ್ಸೆಲೋನಾದ ಸಗ್ರಡಾ ಫೆಮಿಲಿಯಾ, ಯುಕೆಯ ಸ್ಟೋನ್‌ಹೆಂಜ್ ಸೇರಿದಂತೆ ಪ್ರಸಿದ್ಧ ಪಾರಂಪರಿಕ ತಾಣಗಳ ಪ್ರತಿಕೃತಿಗಳನ್ನು ಈ ಪಾರ್ಕ್‌ನಲ್ಲಿ ನಿರ್ಮಿಸಲಾಗುತ್ತದೆ. ಜತೆಗೆ, ಅಬುಧಾಬಿಯ ಮಸೀದಿ, ಲಂಡನ್ ಬ್ರಿಡ್ಜ್, ಮೌಂಟ್ ರಶೊ¾àರ್‌ನ ಮಾದರಿಗಳ ಕಲಾಕೃತಿಗಳನ್ನೂ ಇರಿಸಲಾಗುತ್ತದೆ. ಹಂಪಿ, ಮೈಸೂರು ಅರಮನೆ:
2019ರಲ್ಲಿ ದಕ್ಷಿಣ ದೆಹಲಿಯಲ್ಲೂ ವೇಸ್ಟ್-ಟು-ವಂಡರ್ ಹೆಸರಿನ ಪಾರ್ಕ್ ಸ್ಥಾಪಿಸಲಾಗಿತ್ತು. ಅದರಲ್ಲಿ ಮೈಸೂರು ಅರಮನೆ, ಹಂಪಿ, ತಾಜ್‌ಮಹಲ್, ಐಫೆಲ್ ಟವರ್ ಸೇರಿದಂತೆ ದೇಶ-ವಿದೇಶಗಳ ಸ್ಮಾರಕಗಳ ಪ್ರತಿಕೃತಿಗಳನ್ನು ಇಡಲಾಗಿತ್ತು.