ನವದೆಹಲಿ: ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ ಲಘು ಮಳೆಯ ನಂತರ ಶನಿವಾರ ಮಧ್ಯಾಹ್ನ (ಮಾ18) ಭಾರಿ ಮಳೆಯಾಗಿದೆ.
ಮುಂದಿನ ಕೆಲವು ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ತುಂತುರು ಮಳೆಯ ನಂತರ ಮೋಡ ಕವಿದ ವಾತಾವರಣ ಮತ್ತು ತಂಪಾದ ಗಾಳಿಗೆ ದೆಹಲಿ ಸಾಕ್ಷಿಯಾಯಿತು. ಮಾರ್ಚ್ 17 ರಿಂದ ಮಾರ್ಚ್ 20 ರವರೆಗೆ ದೇಶದ ಹಲವಾರು ಭಾಗಗಳಲ್ಲಿ ಸಂಭವನೀಯ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಈಗಾಗಲೇ ನೀಡಿತ್ತು.
ವಾತಾವರಣದಲ್ಲಿನ ಬದಲಾವಣೆಯನ್ನು ಆಚರಿಸಿದ ದೆಹಲಿಯ ಹಲವು ಜನರು ತಮ್ಮ ಮನೆಗಳು ಮತ್ತು ಬೀದಿಗಳಿಂದ ಭಾರೀ ಮಳೆಯ ದೃಶ್ಯಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ದೆಹಲಿ-ಎನ್‌ಸಿಆರ್ ಪ್ರದೇಶವನ್ನು ಹೊರತುಪಡಿಸಿ, ಪಂಜಾಬ್, ಹರಿಯಾಣ, ಚಂಡೀಗಢ, ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿಯೂ ಸಹ ಮಾರ್ಚ್ 20 ರ ವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.