Advertisement

ಮುಸ್ಲಿಂ ಮಹಿಳೆಯರ ಫೋಟೋ ಆನ್‌ಲೈನ್‌ನಲ್ಲಿ ಮಾರಾಟ ಜಾಲ

12:16 AM Jan 03, 2022 | Team Udayavani |

ಹೊಸದಿಲ್ಲಿ:ಮುಸ್ಲಿಂ ಸಮುದಾಯದ ಸಾವಿ ರಾರು ಮಹಿಳೆಯರ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ “ಬುಲ್ಲಿ ಭಾಯ್‌’ ಎಂಬ ಆ್ಯಪ್‌ ಅನ್ನು ಬ್ಲಾಕ್‌ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ರೈಲ್ವೇ ಖಾತೆ ಸಚಿವ ಅಶ್ವಿ‌ನಿ ವೈಷ್ಣವ್‌ ರವಿವಾರ ತಿಳಿಸಿದ್ದಾರೆ.

Advertisement

ಸಮುದಾಯದ ಪ್ರಮುಖರು ಶನಿವಾರ ಸ್ಕ್ರೀನ್‌ಶಾಟ್‌ ಸಹಿತ ಈ ಆಘಾತಕಾರಿ ಬೆಳವಣಿಗೆ ಬಗ್ಗೆ ಟ್ವೀಟ್‌ ಮಾಡಿದ್ದರು. ಶಿವಸೇನೆಯ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ತಿರುವನಂತಪುರದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸೇರಿದಂತೆ ಪ್ರಮುಖರು ಈ ಬಗ್ಗೆ ಕಟುವಾಗಿ ಟೀಕಿಸಿ, ತಪ್ಪಿತ ಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಕೂಡಲೇ ಸ್ಪಂದಿಸಿದ ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌, ಆ್ಯಪ್‌ ಅನ್ನು ಬ್ಲಾಕ್‌ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಮುಂಬಯಿ ಮತ್ತು ದಿಲ್ಲಿ ಪೊಲೀಸರು ಈ ಬಗ್ಗೆ ತನಿಖೆಯನ್ನೂ ಶುರು ಮಾಡಿದ್ದಾರೆ. ದಿಲ್ಲಿ ಪೊಲೀಸರು ಈ ಪ್ರಕರಣ ಸಂಬಂಧ ಆ್ಯಪ್‌ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸು ದಾಖಲಿಸಿಕೊಂಡಿದೆ.

ಇದನ್ನೂ ಓದಿ:ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್‌ ಸೈನಿಕನ ಹೊಡೆದುರುಳಿಸಿದ ಸೇನೆ

ಗಿಟ್‌ಹಬ್‌ ಎಂಬ ಆನ್‌ಲೈನ್‌ ವೇದಿಕೆ ಹೆಣ್ಣುಮಕ್ಕಳ ಫೋಟೋಗಳನ್ನು ಹರಾಜು ಹಾಕಿ, ಮಾರಾಟ ನಡೆಯುತ್ತಿತ್ತು. ಈ ಹಿಂದೆಯೂ ಗಿಟ್‌ ಹಬ್‌ ವೇದಿಕೆಯು “ಸಲ್ಲಿ ಡೀಲ್ಸ್‌’ ಎಂಬ ಆ್ಯಪ್‌ ಮೂಲಕ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್‌ ಮಾಡಿ, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರನ್ನು ಆಹ್ವಾನಿಸುತ್ತಿತ್ತು. ಮಹಿಳೆಯರ ಸಾಮಾಜಿಕ ಜಾಲ ತಾಣಗಳ ಖಾತೆಯಿಂದ ಫೋಟೋಗಳನ್ನು ತೆಗೆದುಕೊಂಡು ಈ ಕೃತ್ಯ ಎಸಗಲಾಗುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next