ನವದೆಹಲಿ: ದೆಹಲಿಯಲ್ಲಿರುವ ಶಾಸಕರ ವೇತನ ಹಾಗೂ ಭತ್ಯೆ ಹೆಚ್ಚಳಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಸಲ್ಲಿಸಿದ್ದ ಪ್ರಸ್ತಾಪಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮತಿ ನೀಡಿದ್ದು, ಇನ್ನು ಮುಂದೆ ದೆಹಲಿ ಶಾಸಕರ ವೇತನದಲ್ಲಿ ಶೇ.66ರಷ್ಟು ಹೆಚ್ಚಳವಾಗಲಿದೆ.
ಪರಿಷ್ಕರಣೆಯ ಪ್ರಕಾರ ಇನ್ನುಮುಂದೆ ದೆಹಲಿ ಶಾಸಕರು ಮಾಸಿಕ 90 ಸಾವಿರ ರೂ. ವೇತನ ಪಡೆಯಲಿದ್ದು, ದೈನಂದಿನ ಭತ್ಯೆಯಾಗಿ 1,500 ರೂ.ಗಳನ್ನು ಪಡೆಯಲಿದ್ದಾರೆ. ಈ ಹಿಂದೆ ಮಾಸಿಕ ವೇತನ 50 ಸಾವಿರ ರೂ. ಹಾಗೂ ದೈನಂದಿನ ಭತ್ಯೆ 1 ಸಾವಿರ ರೂ.ಗಳನ್ನು ನೀಡಲಾಗುತ್ತಿತ್ತು. ಪ್ರಸ್ತಾಪವನ್ನು ದೆಹಲಿ ವಿಧಾನಸಭೆಯಲ್ಲಿ ಅನುಮೋದಿಸಿ, ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿತ್ತು.
ಈಗ ರಾಷ್ಟ್ರಪತಿಗಳ ಅಂಕಿತದ ಮೂಲಕ ವೇತನ ಹೆಚ್ಚಳವಾಗಿದೆ. ಹೀಗಿದ್ದರೂ ದೆಹಲಿ ಶಾಸಕರ ವೇತನ ದೇಶದಲ್ಲೇ ಕನಿಷ್ಠ ಆಪ್ ಹೇಳಿಕೊಂಡಿದೆ.