Advertisement
ಆನ್ಲೈನ್ ಮಾರುಕಟ್ಟೆಯಲ್ಲಿ ಅಗ್ಗದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ಅಲಿ ಎಕ್ಸ್‌ಪ್ರೆಸ್ ಸದ್ಯ ಭಾರತದಲ್ಲಿ ಬ್ಯಾನ್ ಆಗಿದೆ. ಚೀನಾ ಮೂಲದ ಈ ಕಂಪೆನಿಯನ್ನು 2020 ರಲ್ಲಿ ಭಾರತ ಸರ್ಕಾರ 58 ಇತರ ಆ್ಯಪ್ ಗಳೊಂದಿಗೆ ಬ್ಯಾನ್ ಮಾಡಿದೆ. ಆದರೆ ಬ್ಯಾನ್ ಆಗುವುದುಕ್ಕಿಂತ ಮೊದಲೇ ದೆಹಲಿ ಮೂಲದ ನಿತಿನ್ ಅಗರ್ವಾಲ್ ಎಂಬ ಟೆಕ್ಕಿ ಈ ಸೈಟ್ ನಲ್ಲಿ ಪ್ರಾಡೆಕ್ಟ್ ವೊಂದನ್ನು ಆರ್ಡರ್ ಮಾಡಿದ್ದಾರೆ. ಅದು 2023 ಅಂದರೆ ನಾಲ್ಕು ವರ್ಷದ ಬಳಿಕ ಡೆಲಿವರಿ ಆಗಿದೆ.
Related Articles
Advertisement
ನಿತಿನ್ ಅಗರ್ವಾಲ್ ಅವರ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ನಾನಾ ಬಗೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. “ನಾನು 2019 ಡಿಸೆಂಬರ್‌ನಲ್ಲಿ 2 ಉತ್ಪನ್ನಗಳನ್ನು ಆರ್ಡರ್ ಮಾಡಿದ್ದೇನೆ. ಹಾಗಾಗಿ ಇದು ಒಂದು ದಿನ ಡೆಲಿವರಿಯಾಗಬಹುದೆಂದು ನಾನು ಭಾವಿಸುತ್ತೇನೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ಇದು ಹೇಗೆ ಸಾಧ್ಯ? ನಾನು 2017-19 ರ ಸುಮಾರಿಗೆ ನಾನು ಆರ್ಡರ್ ಮಾಡಿದ ಪ್ರಾಡೆಕ್ಟ್ ಗಳು ಬಂದಿಲ್ಲ. ಅದಕ್ಕಾಗಿ ನಾನು ಈಗಾಗಲೇ ಪಾವತಿಸಿದ್ದೇನೆ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
ಭಾರತದಲ್ಲಿ ಅಲಿ ಎಕ್ಸ್‌ಪ್ರೆಸ್ ಬ್ಯಾನ್ ಆದರೂ ಥರ್ಡ್ ಪಾರ್ಟಿ ಆ್ಯಪ್ ಹಾಗೂ ವಿಪಿಎನ್ ಮೂಲಕ ಕೆಲವರು ಇದನ್ನು ಬಳಸುತ್ತಿದ್ದಾರೆ.