Advertisement

Karnataka: ಸಚಿವರಿಗೆ ದಿಲ್ಲಿ ಪಾಠ- ರಾಹುಲ್‌, ಖರ್ಗೆ ಅವರಿಂದ ಮಾರ್ಗದರ್ಶನ

11:48 PM Jun 13, 2023 | Team Udayavani |

ಬೆಂಗಳೂರು: ರಾಜ್ಯದ ನೂತನ ಸಚಿವರಿಗೆ ಈ ವಾರಾಂತ್ಯ ದಿಲ್ಲಿಯಲ್ಲಿ “ನೀತಿ ಪಾಠ” ನಡೆಯಲಿದೆ. ಸರಕಾರ ಹಾಗೂ ಪಕ್ಷದ ನಡುವಿನ ಸಮನ್ವಯ ಮತ್ತು ಸಚಿವರ ಕಾರ್ಯವೈಖರಿ ಹೇಗಿರಬೇಕು ಎಂಬ ಬಗ್ಗೆ ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರು ಬೋಧಿಸಲಿದ್ದಾರೆ.

Advertisement

ಸರಕಾರದ ಬಗ್ಗೆ ರಾಜ್ಯದ ಜನತೆ, ವಿಶೇಷವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಬಹಳ ನಿರೀಕ್ಷೆ ಇರಿಸಿಕೊಂಡಿದೆ. ಜತೆಗೆ ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ವಿವಿಧ ರಾಜ್ಯಗಳು ಗಮನಿಸುತ್ತಿವೆ. ಇದೊಂದು ಯಶಸ್ವೀ ಸರಕಾರ ಆಗಬೇಕೆಂಬುದು ಹೈಕಮಾಂಡ್‌ ಸಂಕಲ್ಪ.

ಏನೇನು ಸಲಹೆ ಸೂಚನೆ?

ಅಧಿಕಾರದಲ್ಲಿ ಇರುವವರು ಯಾವ ಕಾರಣಕ್ಕೂ ಪಕ್ಷವನ್ನು ಮರೆಯಬಾರದು ಹಾಗೂ ನಿರ್ಲಕ್ಷ é ಮಾಡಬಾರದು, ಸರಕಾರ ಹಾಗೂ ಪಕ್ಷದ ನಡುವೆ ಸಮನ್ವಯ ಇರಬೇಕು, ತಿಂಗಳಿಗೊಮ್ಮೆ ಸಚಿವರು ಕಡ್ಡಾಯವಾಗಿ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲುಗಳಿಗೆ ಸ್ಪಂದಿಸಬೇಕು, ಜಿಲ್ಲಾ ಕೇಂದ್ರಗಳಿಗೆ ತೆರಳಿದಾಗ ಜಿಲ್ಲಾ ಕಾಂಗ್ರೆಸ್‌ ಕಚೇರಿಗಳಿಗೆ ಭೇಟಿ ನೀಡಬೇಕು. ವಿಶೇಷವಾಗಿ ತಾವು ನಿರ್ವಹಿಸುತ್ತಿರುವ ಇಲಾಖೆಗಳಲ್ಲಿ ಯಾವುದೇ ವಿವಾದಕ್ಕೆ ಎಡೆ ಮಾಡಿಕೊಡದೆ ಉತ್ತಮ ರೀತಿಯಲ್ಲಿ ಆಡಳಿತ ಒದಗಿಸಬೇಕು, ಸಾರ್ವಜನಿಕರ ಜತೆ ಸಂಪರ್ಕ ಇರಿಸಿಕೊಂಡು ಕೆಲಸ ಮಾಡಬೇಕು ಎಂಬಿತ್ಯಾದಿಗಳ ಬಗ್ಗೆ ಹೈಕಮಾಂಡ್‌ ಸಚಿವರಿಗೆ ಪಾಠ ಮಾಡಲಿದೆ.

ದೂರುಗಳ ಹಿನ್ನೆಲೆಯಲ್ಲಿ  ಕ್ರಮ

Advertisement

ಕೆಲವು ಸಚಿವರ ಬಗ್ಗೆ ದೂರುಗಳು ದಿಲ್ಲಿ ತಲುಪಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಹೈಕಮಾಂಡ್‌ ಈಗ ಎಲ್ಲ ಸಚಿವರಿಗೆ ಸರಕಾರದ ಕಾರ್ಯವೈಖರಿ, ಜನಸಂಪರ್ಕ ಹೇಗಿರಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಲು ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next