Advertisement

ದೆಹಲಿ ಕರ್ನಾಟಕ ಸಂಘ: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

04:45 PM Aug 03, 2017 | |

ಮುಂಬಯಿ: ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಜು. 29ರಂದು  ಆಯೋಜಿಸಿದ ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಬೆಂಗಳೂರು ಹಾಗೂ ನಾಡ ಪ್ರಭು ಕೆಂಪೇಗೌಡ ಫೌಂಡೇಶನ್‌ ಜೊತೆಗೂಡಿ ನಾಡಪ್ರಭು ಕೆಂಪೇಗೌಡ, ದಾಸಶ್ರೇಷ್ಠ ಕನಕದಾಸರು ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಸಾಂಸ್ಕೃತಿಕ ಉತ್ಸವವು ನಡೆಯಿತು. ಈ ಕಾರ್ಯಕ್ರಮವನ್ನು ಕರ್‌ಕರ್‌ಡೂಮ್‌ ಕೋರ್ಟಿನ ಹಿರಿಯ ನ್ಯಾಯಾಧೀಶರಾದ  ಎ. ಎಸ್‌. ಜಯಚಂದ್ರ ಅವರು ಉದ್ಘಾಟಿಸಿದರು.

Advertisement

ಮುಖ್ಯ ಅತಿಥಿಗಳಾಗಿ ದೆಹಲಿ ಜಲಬೋರ್ಡ್‌ನಆರ್ಥಿಕ ನಿರ್ದೇಶಕ,  ಐಎಎಸ್‌  ಅಧಿಕಾರಿ ನವೀನ್‌ ಲಕ್ಷ್ಮಣ್‌, ಗ್ರಾಹಕರ ವ್ಯಾಜ್ಯ ಪರಿಹಾರ ನವದೆಹಲಿ ಇದರ  ಡಾ|  ಎಸ್‌. ಎಂ. ಕಂಟೀಕರ್‌, ಬಿ.ಎಲ್‌. ಸುರೇಶ್‌, ಡಿಸಿಪಿ ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜಂಟಿ ನಿರ್ದೇಶಕರು ಬಲವಂತರಾವ್‌ ಪಾಟೀಲ್‌, ಡಾ| ತ್ಯಾಗರಾಜ್‌ ವಾಷಿಂಗ್ಟನ್‌ ಡಿ.ಸಿ. ಅಮೆರಿಕ, ಡಾ| ಎಂ. ಎಸ್‌. ಶಶಿಕುಮಾರ್‌,  ಗಂಡುಗಲಿ ಮದಕರಿ ನಾಯಕ ಅಸೋಸಿಯೇಶನ್‌ ಅಧ್ಯಕ್ಷ  ಬಿ. ಕೆ .ಬಸವರಾಜು ಉಪಸ್ಥಿತರಿದ್ದರು.  ಸಮಾರಂಭದ ಅಧ್ಯಕ್ಷತೆಯನ್ನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ  ವಸಂತ ಶೆಟ್ಟಿ ಬೆಳ್ಳಾರೆ  ವಹಿಸಿದ್ದರು.  ಪ್ರಧಾನ ಕಾರ್ಯದರ್ಶಿ  ಸಿ. ಎಂ. ನಾಗರಾಜ, ವೆಂಕಿ ಸ್ಕೂಲ್‌ ಆಫ್‌ ಡಾನ್ಸ್‌ನ ಅಧ್ಯಕ್ಷ  ವೆಂಕಟಾದ್ರಿ ಉಪಸ್ಥಿತಿಯಲ್ಲಿ ಈ ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಿ  ಕಲಾ ತಂಡಗಳು ಪ್ರದರ್ಶನವನ್ನು ನೀಡಿದವು.

ಸಂಜೀವಿನಿ ಬೆಂಗಳೂರು ಅವರಿಂದ ನೃತ್ಯ, ವೆಂಕಿ ಸ್ಕೂಲ್‌ ಆಫ್‌ ಡಾನ್ಸ್‌ ಅವರಿಂದ ಜಾನಪದ ನೃತ್ಯ, ಭರತ್‌ ಮತ್ತು ತಂಡದಿಂದ ಕಂಟೆಂಪರರಿ ನೃತ್ಯ, ವೈಷ್ಣವಿ ಮತ್ತು ತಂಡದಿಂದ ಭರತನಾಟ್ಯ, ಭೂಮಿಕಾ ನೃತ್ಯ ಹಾಗೂ ಸಂಗೀತ ಶಾಲೆಯಿಂದ ಸಮೂಹ ನೃತ್ಯ, ಭಾಗ್ಯ ಮತ್ತು ತಂಡದಿಂದ ಶಾಸ್ತ್ರೀಯ ನೃತ್ಯ, ನೃತ್ಯಾಂಜಲಿ ನಾಟ್ಯ ಕಲಾ ಅಕಾಡೆಮಿಯಿಂದ ಜಾನಪದ ನೃತ್ಯ, ಲಲಿತ್‌ ಎಂ. ಪಿ. ಭಾರದ್ವಾಜ್‌ ಬೆಂಗಳೂರು ಅವರಿಂದ ಭರತನಾಟ್ಯ, ಮೊನೀಶ ಸಾಂಸ್ಕೃತಿಕ ಕಲಾ ಅಕಾಡೆಮಿ ಹೊಸಕೋಟೆ ಇವರಿಂದ ಸಮೂಹ ನೃತ್ಯ, ರೂಪ ಮತ್ತು ತಂಡ ಕೋಲಾರ ಅವರಿಂದ ನೃತ್ಯರೂಪಕ, ಗಾನಗಂಧರ್ವ ನವದೆಹಲಿ ಅವರಿಂದ ಸುಗಮ ಸಂಗೀತ, ಕು| ಸಪ್ನಾ ಅತ್ತಾವರ ನವದೆಹಲಿ ಅವರಿಂದ ಶಾಸ್ತ್ರೀಯ ನೃತ್ಯ, ಕು| ಪ್ರೇರಣಾ ರಾವ್‌ ನವದೆಹಲಿ ಅವರಿಂದ ಕಥಕ್‌ ನೃತ್ಯ, ರಚನಾ ಜೆ. ಅವರಿಂದ ಭರತನಾಟ್ಯ, ಹಿತಶ್ರೀ ರಾಘವೇಂದ್ರ, ಗುರ್‌ಗಾಂವ್‌ ಅವರಿಂದ ನೃತ್ಯರೂಪಕ, ನವನೀತ ರಾಜೇಶ್‌ ಗುರ್‌ಗಾಂವ್‌ ಅವರಿಂದ ಶಾಸ್ತ್ರೀಯ ನೃತ್ಯ, ಕು| ಅಕ್ಷತಾ ಎ. ಕಲ್ಲೂರು ಅವರಿಂದ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ದೆಹಲಿಯ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ಉತ್ಸವಕ್ಕೆ ಕಾರಣರಾದ ಪುಷ್ಪಾ³ಂಜಲಿ ನಾಟ್ಯ ಕಲಾ ಅಕಾಡೆಮಿ, ಕೆ. ಆರ್‌.  ಪುರಂ, ಬೆಂಗಳೂರಿನ ಕಾರ್ಯದರ್ಶಿಗಳಾದ ವಿದ್ವಾನ್‌ ಕೋಲಾರ ರಮೇಶ್‌ ಇವರಿಗೆ ಎಲ್ಲಾ ಅತಿಥಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next