Advertisement

ಚಪಾಕ್‌ ಸಿನಿಮಾದಲ್ಲಿ ಅಪರ್ಣಾ ಭಟ್‌ ಹೆಸರನ್ನು ಏಕೆ ಉಲ್ಲೇಖೀಸಿಲ್ಲ?

10:05 AM Jan 12, 2020 | sudhir |

ನವದೆಹಲಿ: ದೀಪಿಕಾ ಪಡುಕೋಣೆ ಅಭಿನಯದ, ಮೇಘನಾ ಗುಲ್ಜಾರ್‌ ನಿರ್ದೇಶನದ ಹಿಂದಿ ಸಿನಿಮಾ ಚಪಾಕ್‌ನ ವಿವಾದ ಮುಂದುವರಿದಿದೆ. ಸಿನಿಮಾ ಕಥೆಯನ್ನು ನೀಡಿದ ವಕೀಲೆ ಅಪರ್ಣಾ ಭಟ್‌ ಹೆಸರನ್ನು ಏಕೆ ಉಲ್ಲೇಖೀಸಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯ ಪ್ರಶ್ನಿಸಿದೆ. ಅಷ್ಟು ಮಾತ್ರವಲ್ಲ, ಜ.15ರಿಂದ ಚಪಾಕ್‌ ಪ್ರಸಾರವಾಗುವ ಎಲ್ಲ ಪರದೆಗಳಲ್ಲಿ ಆ ಹೆಸರನ್ನು ಹಾಕಬೇಕೆಂದು ನ್ಯಾಯಪೀಠ ಆದೇಶ ನೀಡಿದೆ. ಇದನ್ನು ವಿರೋಧಿಸಿದ ಸಿನಿಮಾ ತಂಡ, ಆ ರೀತಿಯ ಯಾವುದೇ ಕಾನೂನುಬದ್ಧ ಒಪ್ಪಂದಗಳು ನಮ್ಮ ನಡುವೆ ಆಗಿಲ್ಲ ಎಂದು ವಾದಿಸಿತು. ಅದನ್ನು ನ್ಯಾಯಪೀಠ ಪರಿಗಣಿಸಿಲ್ಲ. ಚಪಾಕ್‌ ಸಿನಿಮಾ ಮೊದಲ ದಿನ 4.77 ಕೋಟಿ ರೂ. ಗಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next