Advertisement

ಜ.29ರ ವರೆಗೆ ದಿಲ್ಲಿ ಉಪ ಚುನಾವಣೆ ಪ್ರಕಟಿಸಬೇಡಿ: ECಗೆ ಸುಪ್ರೀಂ

03:55 PM Jan 24, 2018 | udayavani editorial |

ಹೊಸದಿಲ್ಲಿ : ಲಾಭದಾಯಕ ಹುದ್ದೆ ಹೊಂದಿದ್ದ ಕಾರಣಕ್ಕೆ 20 ಮಂದಿ ಆಪ್‌ ಶಾಸಕರನ್ನು ಅಮಾನತುಗೊಳಿಸಿ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆಗೆ ಮಧ್ಯಾವಧಿ ತಡೆ ನೀಡಲು ದಿಲ್ಲಿ ಹೈಕೋರ್ಟ್‌ ಇಂದು ನಿರಾಕರಿಸಿತು.

Advertisement

ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 29ರ ಸೋಮವಾರಕ್ಕೆ ನಿಗದಿಸಲಾಗಿದ್ದು ಅಲ್ಲಿಯ ತನಕ ಉಪ ಚುನಾವಣೆಗಳನ್ನು ಪ್ರಕಟಿಸದಂತೆ ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗವನ್ನು ಕೇಳಿಕೊಂಡಿದೆ. 

20 ಆಪ್‌ ಶಾಸಕರನ್ನು ಅನರ್ಹಗೊಳಿಸಿರುವ ಚುನಾವಣಾ ಆಯೋಗ ಫೆ.6ರ ಒಳಗಾಗಿ ತನ್ನಉತ್ತರವನ್ನು ಸಲ್ಲಿಸುವಂತೆಯೇ  ದಿಲ್ಲಿ ಹೈಕೋರ್ಟ್‌ ಚುನಾವಣಾ ಆಯೋಗಕ್ಕೆ ಆದೇಶ ನೀಡಿತು.

ತಮ್ಮ ಅನರ್ಹತೆಯ ವಿರುದ್ಧ  20 ಮಂದಿ ಆಪ್‌ ಶಾಸಕರು ನಿನ್ನೆ ಮಂಗಳವಾರ ದಿಲ್ಲಿ ಹೈಕೋರ್ಟ್‌ ಮೆಟ್ಟಲೇರಿದ್ದರು. ಕಳೆದ ಭಾನುವಾರ ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರು 20 ಮಂದಿ ಆಪ್‌ ಶಾಸಕರ ಅನರ್ಹತೆಗೆ ಚುನಾವಣಾ ಆಯೋಗ ಮಾಡಿದ್ದ ಶಿಫಾರಸಿಗೆ ಅನುಮೋದನೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next