ನವದೆಹಲಿ: ಸಲಿಂಗಕಾಮಿಗಳ ಮದುವೆಗೆ ಕಾನೂನಾತ್ಮಕ ಮಾನ್ಯತೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನೇರ ಪ್ರಸಾರ ಮಾಡಬೇಕೆಂದು ಸಲಿಂಗಕಾಮಿ ಜೋಡಿಗಳು ಅರ್ಜಿ ಸಲ್ಲಿಸಿದೆ.
ಈ ವಿಚಾರವಾಗಿ ನ್ಯಾಯಾಲಯವು ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಸಲಿಂಗಕಾಮಿ ವಿವಾಹಗಳಿಗೆ ವಿಶೇಷ ವಿವಾಹ ಕಾಯ್ದೆ, ಹಿಂದೂ ವಿವಾಹ ಕಾಯ್ದೆ ಹಾಗೂ ವಿದೇಶಿ ವಿವಾಹ ಕಾನೂ ನಿನ ಅನ್ವಯ ಮಾನ್ಯತೆ ನೀಡಬೇಕು ಎಂದು ತೃತೀಯ ಲಿಂಗಿ ಸಮುದಾಯವು ಈಗಾಗಲೇ ಅರ್ಜಿ ಸಲ್ಲಿಸಿದೆ. ಜತೆಗೆ, ಈ ವಿಚಾರವು ರಾಷ್ಟ್ರೀಯ ಹಾಗೂ ಸಾಂವಿಧಾನಿಕ ಮಹತ್ವವುಳ್ಳದ್ದು ಎಂದೂ ಹೇಳಿವೆ.
ಇದನ್ನೂ ಓದಿ:ನೌಕಾಪಡೆಗೆ ಅಡ್ಮಿರಲ್ ಹರಿಕುಮಾರ್ ಮುಖ್ಯಸ್ಥ
ಈಗ ಅದರ ಅಂತಿಮ ವಿಚಾರಣೆಯನ್ನು ಯೂಟ್ಯೂಬ್ ಅಥವಾ ಬೇರಾವುದಾದರೂ ಮಾಧ್ಯಮದ ಮೂಲಕ ನೇರ ಪ್ರಸಾರ ಮಾಡಬೇಕೆಂದು ಕೋರಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮೂಲದ ಸಲಿಂಗಕಾಮಿ ಜೋಡಿಗಳು ಹೊಸದಾಗಿ ಅರ್ಜಿ ಸಲ್ಲಿಸಿವೆ. ಈ ವಿಚಾರವಾಗಿ ಪ್ರತ್ಯುತ್ತರ ನೀಡಲು ಕೇಂದ್ರಕ್ಕೆ ನ್ಯಾಯಾಲಯ ಕಾಲಾವಕಾಶ ನೀಡಿದೆ. ಮುಂದಿನ ವಿಚರಣೆ ಫೆ.3ರಂದು ನಡೆಯಲಿದೆ.